ರಾಷ್ಟ್ರೀಯ

ಪಂಜಾಬ್‌ನಲ್ಲಿ ಕೇಜ್ರಿವಾಲ್ ಕಾರಿನ ಮೇಲೆ ದೊಣ್ಣೆ ಹಾಗೂ ಕಲ್ಲಿನಿಂದ ದಾಳಿ

Pinterest LinkedIn Tumblr

arvind-carಅಮೃತಸರ: ಪಂಜಾಬ್ ನ ಲೂಧಿಯಾನದಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಪರ ಪ್ರಚಾರದಲ್ಲಿ ತೊಡಗಿದ್ದ ವೇಳೆ ನನ್ನ ಕಾರಿನ ಮೇಲೆ ದೊಣ್ಣೆ ಹಾಗೂ ಕಲ್ಲಿನಿಂದ ದಾಳಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದಾಳಿಯಲ್ಲಿ ತಮ್ಮ ಕಾರಿನ ಮುಂಬದಿಯ ಗ್ಲಾಸ್ ಒಡೆದಿದ್ದು, ಇದೆಲ್ಲಾ ಪಂಜಾಬ್ ನಲ್ಲಿ ಅಧಿಕಾರದಲ್ಲಿರುವ ಅಕಾಲಿ ದಳದ ಕಾರ್ಯಕರ್ತರ ಕೃತ್ಯ ಎಂದು ಟೀಕಿಸಿದ್ದಾರೆ. ಅಲ್ಲದೆ ಬಾದಲ್‌ಗ‌ಳು ಮತ್ತು ಕಾಂಗ್ರೆಸ್‌ ಹತಾಶಗೊಂಡಿದ್ದಾರೆಯೇ? ಅವರು ನನ್ನ ಉತ್ಸಾಹವನ್ನು ಒಡೆಯಲು ಸಾಧ್ಯವಿಲ್ಲ’ ಎಂದು ಬರೆದಿದ್ದಾರೆ.

2017 ರಲ್ಲಿ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಕೇಜ್ರಿವಾಲ್‌ ಅವರು ಆಮ್‌ ಆದ್ಮಿ ಪಕ್ಷದ ಸಂಘಟನೆ ನಡೆಸುವ ಸಲುವಾಗಿ 5 ದಿನಗಳ ಪ್ರವಾಸದಲ್ಲಿದ್ದಾರೆ.

Write A Comment