ರಾಷ್ಟ್ರೀಯ

ನಾನು ಮೋದಿಗಿಂತ ದೊಡ್ಡ ದೇಶಭಕ್ತ: ಕೇಜ್ರಿವಾಲ್

Pinterest LinkedIn Tumblr

kejrival

ನವದೆಹಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾನು ಪ್ರಧಾನಿ ನರೇಂದ್ರ ಮೋದಿಯವರಿಗಿಂತಲೂ ದೊಡ್ಡ ದೇಶಭಕ್ತ ಎಂದು ಹೇಳಿದ್ದಾರೆ.

ಸೋಮವಾರ ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮಾಡಿದ ಕೇಜ್ರಿವಾಲ್, ನನ್ನ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ನಾನು ದಲಿತ, ಹಿಂದುಳಿದ ವರ್ಗ ಮತ್ತು ಬಡವರ ಪರವಾಗಿ ದನಿಯೆತ್ತಿದ್ದೇನೆ. ಹಾಗಾಗಿ ಬಿಜೆಪಿಯವರ ಪಾಲಿಗೆ ದೇಶ ವಿರೋಧಿ. ನನ್ನ ಸದ್ದಡಗಿಸಲಾಗುವುದಿಲ್ಲ, ನಾನು ಅವರಿಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಅದೇ ವೇಳೆ ಜೆಎನ್‌ಯುನಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದವರು ಕಾಶ್ಮೀರದವರಾಗಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ನಾನು ಮೋದಿಯವರಿಗಿಂತ ದೊಡ್ಡ ದೇಶಭಕ್ತ. ದೇಶವನ್ನು ಒಡೆಯುತ್ತೇವೆ ಎಂದು ಘೋಷಣೆ ಕೂಗಿದವರನ್ನು ಯಾಕೆ ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ನಾನು ಕೇಳುತ್ತೇನೆ. ಯಾಕೆಂದರೆ ಅವರು ಕಾಶ್ಮೀರದವರು. ಅವರನ್ನು ಬಂಧಿಸಿದರೆ ಮೆಹಬೂಬ ಮುಫ್ತಿ ಮುನಿಸಿಕೊಳ್ಳುತ್ತಾರೆ.

ನಮ್ಮ ಸೈನಿಕರು ಗಡಿಭಾಗದಲ್ಲಿ ಪ್ರತೀ ದಿನ ಹುತಾತ್ಮರಾಗುತ್ತಿದ್ದಾರೆ. ಆದರೆ ಕಾಶ್ಮೀರದಲ್ಲಿ ಸರ್ಕಾರ ರಚಿಸುವುದಕ್ಕೋಸ್ಕರ ಮೋದಿಯವರು ದೇಶ ವಿರೋಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Write A Comment