ಮನೋರಂಜನೆ

ಏಷ್ಯಾಕಪ್: ಪಾಕಿಸ್ತಾನವನ್ನು ಹಗುರವಾಗಿ ಪರಿಗಣಿಸಬೇಡಿ: ಗವಾಸ್ಕರ್ ಕಿವಿಮಾತು

Pinterest LinkedIn Tumblr

Sunil Gavaskar

ಢಾಕಾ: ಏಷ್ಯಾಕಪ್ ಟೂರ್ನಿಯಲ್ಲಿ ಯಾವುದೇ ಕಾರಣಕ್ಕೂ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಹಗರುವಾಗಿ ಪರಿಗಣಿಸಬಾರದು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರತ ತಂಡಕ್ಕೆ ಕಿವಿ ಮಾತು ಹೇಳಿದ್ದಾರೆ.

ಢಾಕಾದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್ ಅವರು, ಟಿ20 ಮಾದರಿ ಕ್ರಿಕೆಟ್ ನಲ್ಲಿ ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲದೆ ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದ್ದು, ಭಾರತ ತಂಡ ಯಾವುದೇ ರೀತಿಯಿಂದಲೂ ಪಾಕಿಸ್ತಾನವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಕಿವಿ ಮಾತು ಹೇಳಿದ್ದಾರೆ.

ಪಾಕಿಸ್ತಾನ ತಂಡದ ಬಹುತೇಕ ಆಟಗಾರರಿಗೆ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಆಡಿದ ಅನುಭವವಿದೆ. ಟಿ20 ಮಾದರಿಗೆ ಅವರು ಸಾಕಷ್ಟು ತಯಾರಿ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ಭಾರತ ಆ ತಂಡವನ್ನು ಲಘುವಾಗಿ ಪರಿಗಣಿಸಬಾರದು. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರೆ ಅದು ತಂಡಕ್ಕೆ ಸಾಕಷ್ಟು ಸಹಕಾರಿಯಾಗುತ್ತದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದು, ಪಾಕಿಸ್ತಾನದ ಎದುರು ಕೂಡ ಉತ್ತಮ ಆಟ ಪ್ರದರ್ಶಿಸಬೇಕಿದೆ. ಆಗ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ ಎಂದು ಗವಾಸ್ಕರ್ ಹೇಳಿದ್ದಾರೆ.

ಐದು ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿರುವ ಭಾರತ ತಂಡ, ಈ ಭಾರಿಯ ಏಷ್ಯಾಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಸಾಕಷ್ಟು ಏಳುಬೀಳುಗಳೊಂದಿಗೆ ಬಾಂಗ್ಲಾದೇಶವನ್ನು 45 ರನ್ ಗಳ ಅಂತರದಿಂದ ಮಣಿಸಿತ್ತು. ನಾಳೆ ಅಂದರೆ ಶನಿವಾರ ಭಾರತ ತಂಡ ಟೂರ್ನಿಯ ತನ್ನ 2ನೇ ಪಂದ್ಯವಾಡುತ್ತಿದ್ದು, ಅದೂ ಕೂಡ ತನ್ನ ಬದ್ಧ ಶತ್ರು ಪಾಕಿಸ್ತಾನದೊಂದಿಗೆ. ಹೀಗಾಗಿ ಪಂದ್ಯದ ಕುರಿತು ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.

ದೇಹಕ್ಕಷ್ಟೇ ವಯಸ್ಸು ಎಂಬುದನ್ನು ಸಾಬೀತುಪಡಿಸಿದ ನೆಹ್ರಾ
ಇದೇ ವೇಳೆ ಭಾರತ ತಂಡದ ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅವರನ್ನು ಕೊಂಡಾಡಿದ ಗವಾಸ್ಕರ್, ದೇಹಕ್ಕಷ್ಟೇ ವಯಸ್ಸು, ಆಟಕ್ಕಲ್ಲ ಎಂಬುದನ್ನು ನೆಹ್ರಾ ಸಾಬೀತು ಪಡಿಸಿದ್ದಾರೆ. ಕಿರಿಯರೊಂದಿಗೆ ಅವರ ಧಾಟಿಯಲ್ಲೇ ಬೌಲಿಂಗ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

Write A Comment