ರಾಷ್ಟ್ರೀಯ

ಯುನೈಟೆಡ್ ಸ್ಪಿರಿಟ್ಸ್ ಗೆ ವಿಜಯ್ ಮಲ್ಯ ರಾಜೀನಾಮೆ; ರಾಜೀನಾಮೆ ನೀಡಿದರು 515 ಕೋಟಿ ಪರಿಹಾರ ಪಡೆಯಲಿರುವ ಮಲ್ಯ

Pinterest LinkedIn Tumblr

malya

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ತಮ್ಮ ಕುಟುಂಬ ಸ್ಥಾಪಿಸಿದ್ದ ಮತ್ತು ಸದ್ಯಕ್ಕೆ ಮದ್ಯ ತಯಾರಿಕೆಯ ಜಾಗತಿಕ ದೈತ್ಯ ಸಂಸ್ಥೆ ಡಿಯಾಜಿಯೊದ ನಿಯಂತ್ರಣದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಸ್ಥಾನಕ್ಕೆ ಮಲ್ಯ ರಾಜೀನಾಮೆ ನೀಡಿದ್ದಾರೆ. ಇದರಂತೆ ಜಿಯಾಜಿಯೋ ಮತ್ತು ಯುನೈಟೆಡ್ ಸ್ಪಿರಿಟ್ಸ್ ಜತೆಗಿನ ಸಂಬಂಧದ ಬಗೆಗಿದ್ದ ಆರೋಪ ಮತ್ತು ಅನಿಶ್ಚತತೆಗಳಿಗೆ ಮಲ್ಯ ಅಂತ್ಯ ಹೇಳಿದ್ದಾರೆ.

ರಾಜೀನಾಮೆ ಕುರಿತಂತೆ ಮಾತನಾಡಿರುವ ಅವರು, ಡಿಯಾಜಿಯೊ ಮತ್ತು ಯುನೈಟೆಡ್ ಸ್ಪಿರಿಟ್ ಜತೆಗಿನ ನನ್ನ ಸಂಬಂಧ ಕುರಿತ ಎಲ್ಲ ಅನಿಶ್ಚತತೆಗಳಿಗೆ ಮತ್ತು ಆರೋಪಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಇದೀಗ ಯುನೈಟೆಡೆ ಸ್ಪಿರಿಟ್ಸ್ ನ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದು, ರಾಜೀನಾಮೆ ನೀಡಿದ ತಕ್ಷಣದಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಹೆಚ್ಚಿನ ಸಮಯವನ್ನು ಇಂಗ್ಲೆಂಡಿನಲ್ಲಿ ನೆಲೆಸಿರುವ ನನ್ನ ಮಕ್ಕಳ ಜತೆ ಕಳೆಯಲು ಇಚ್ಛಿಸಿದ್ದೇನೆಂದು ಹೇಳಿಕೊಂಡಿದ್ದಾರೆ.

ರಾಜೀನಾಮೆ ನೀಡಿದರು 515 ಕೋಟಿ ಪರಿಹಾರ ಪಡೆಯಲಿರುವ ಮಲ್ಯ
ಡಿಯಾಜಿಯೋ ಜತೆಗಿನ ಮಲ್ಯ ಒಪ್ಪಂದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಒಪ್ಪಂದಂತೆ ಸಂಸ್ಥೆ ಮಲ್ಯ ಅವರಿಗೆ ರು.515 ಕೋಟಿ ಪರಿಹಾರ ನೀಡಲಿದೆ. ಜತೆಗೆ ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ನ ವಿಶ್ರಾಂತ ಸಂಸ್ಥಾಪಕರಾಗಿ ಮುಂದುವರೆಯಲಿದ್ದಾರೆ.

Write A Comment