ರಾಷ್ಟ್ರೀಯ

LIVE: ಸಚಿವ ಸುರೇಶ್ ಪ್ರಭುರಿಂದ 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡನೆ

Pinterest LinkedIn Tumblr

Suresh-Prabhu

ನವದೆಹಲಿ: 2016-17ರ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ಅನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸುತ್ತಿದ್ದಾರೆ.
ಕೇಂದ್ರದ 43ನೇ ರೈಲ್ವೆ ಸಚಿವರಾಗಿರುವ ಸುರೇಶ್ ಪ್ರಭು ಅವರು ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದೆ.

ಬಜೆಟ್ ನ ಪ್ರಮುಖ ಅಂಶಗಳು:
* ರೈಲ್ವೆ ಕಾರ್ಯವೈಖರಿಯಲ್ಲಿ ಬದಲಾವಣೆಯ ಅಗತ್ಯ
* ಪ್ರಯಾಣಿಕರ ಆದ್ಯತೆ, ರೈಲಿನ ವೇಗ ದೇಶದ ಪ್ರಗತಿಗೆ ಮೂಲ
* ಪ್ರಸಕ್ತ ವರ್ಷ ರೈಲ್ವೆಯಲ್ಲಿ ಶೇ.92ರಷ್ಟು ಅಭಿವೃದ್ಧಿ ಸಾಧಿಸೋ ಗುರಿಯಿದೆ
* ಸಾಮಾಜಿಕ ಜಾಲ ತಾಣದಿಂದ ರೈಲ್ವೇಗೆ ಅನುಕೂಲವಾಗಿದೆ
* ರೈಲು ವ್ಯವಸ್ಥೆ ಭಾರತೀಯ ಅರ್ಥ ವ್ಯವಸ್ಥೆಯ ಭಾಗವಾಗಿದೆ
* ಪ್ರಧಾನಿಯ ಕನಸುಗಳನ್ನು ನನಸಾಗಿಸುವುದೇ ನಮ್ಮ ಆಧ್ಯತೆ.
* ಕಳೆದ ವರ್ಷದ ಬಜೆಟ್ ನಿಂದ 8,720 ಸಾವಿರ ಕೋಟಿ ರೂಪಾಯಿ ಉಳಿಸಿದ್ದೇವೆ.
* ರೈಲ್ವೆ ವ್ಯವಸ್ಥೆ ಭಾರತೀಯ ಅರ್ಥ ವ್ಯವಸ್ಥೆಯ ಭಾಗವಾಗಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೆಯಲ್ಲಿ ಶೇ.92ರಷ್ಟು ಅಭಿವೃದ್ಧಿ ಸಾಧಿಸೋ ಗುರಿ ಇದೆ.
* 20, 500 ಕಿಲೋ ಮೀಟರ್ ಬ್ರಾಡ್ ಗೇಜ್ ಗುರಿ ಹೊಂದಲಾಗಿದೆ. 65 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು.
* ವಾರಣಾಸಿ ಮತ್ತು ದೆಹಲಿ ನಡುವೆ ಹೊಸ ರೈಲು. ಜನರಲ್ ಬೋಗಿಗಳಲ್ಲೂ ಮೊಬೈಲ್ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ.
* ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಹಣ ಬಳಕೆ. ಈಗಾಗಲೇ 124 ಸಂಸದರು ಹಣ ನೀಡುವುದಾಗಿ ಭರವಸೆ. ದೇಶದ 477 ರೈಲ್ವೆ ನಿಲ್ದಾಣದಲ್ಲಿ ಬಯೋ ಟಾಯ್ಲೆಟ್.
* ವಿಶ್ವದ ಮೊದಲ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ನಮ್ಮ ರೈಲ್ವೆನಲ್ಲಿ ಪರಿಚಯಿಸಲಾಗಿದೆ. ಈ ವರ್ಷದಲ್ಲಿ 17 ಸಾವಿರ ಬಯೋ ಟಾಯ್ಲೆಟ್ ಸ್ಥಾಪನೆ
* ಮುಂದಿನ ವರ್ಷ 2,800 ಕಿಲೋ ಮೀಟರ್ ಹೊಸ ಹಳಿ ನಿರ್ಮಾಣ. ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲು ಪಿವಿಆರ್ ವ್ಯವಸ್ಥೆ.
* ರೈಲ್ವೆಯ ಎಲ್ಲಾ ಹುದ್ದೆಗಳಿಗೂ ಆನ್ ಲೈನ್ ಮೂಲಕ ನೇಮಕಾತಿ. ರೈಲ್ವೆಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಳವಡಿಕೆ. ಈ ವರ್ಷ 1600 ಕಿಮೀ ಉದ್ದ ವಿದ್ಯುದ್ದೀಕರಣ.
* ರೈಲ್ವೆ ಉಪಕರಣ ತಯಾರಿಸಲು ಮೇಕ್ ಇಂಡಿಯಾ ಯೋಜನೆಯಡಿ 2 ಕಾರ್ಖಾನೆಗಳ ನಿರ್ಮಾಣ. 2,800 ಹೊಸ ಮಾರ್ಗಗಳ ನಿರ್ಮಾಣಕ್ಕೆ ನಿರ್ಧಾರ.
* ಪ್ರಯಾಣಿಕರ ರೈಲು ವೇಗ ಸರಾಸರಿ ಗಂಟೆಗೆ 8 ಕಿಲೋ ಮೀಟರ್ ಗೆ ಏರಿಸಲು ಕ್ರಮ
* 2020ರ ವೇಳೆಗೆ ಶೇ.95ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಓಡಲಿವೆ. 2020ರ ವೇಳೆಗೆ ಬೇಕೆಂದಾಗ ಟಿಕೆಟ್ ಸಿಗುವ ವ್ಯವಸ್ಥೆ
* ಈ ವರ್ಷ 1600 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ.ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ 8.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ.
* ಪ್ರಸಕ್ತ ಸಾಲಿನಲ್ಲಿ ರೈಲ್ವೆಯಿಂದ 184,820 ಸಾವಿರ ಕೋಟಿ ರೂಪಾಯಿ ಆದಾಯದ ಗುರಿ ಹೊಂದಿದ್ದೇವೆ.
* 2020ರೊಳಗೆ ಮಾನವರಹಿತ ಕ್ರಾಸಿಂಗ್ ತೆಗೆದುಹಾಕಲಾಗುವುದು. ಮುಂದಿನ 5 ವರ್ಷಗಳಲ್ಲಿ ರೈಲ್ವೆಯ ಮೂಲಕ ಸೌಕರ್ಯ ಅಭಿವೃದ್ಧಿ
* 1.5ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಎಲ್ ಐಸಿ ಒಪ್ಪಿದೆ. ಜನರ ಪ್ರಯಾಣ ಸುಖಕರವಾಗಿರಬೇಕೆನ್ನುವುದೇ ನಮ್ಮ ಉದ್ದೇಶ. ಎಲ್ಲರಿಗೂ ರಿಸರ್ವೇಶನ್ ಸಿಗಬೇಕು ಎಂಬ ಉದ್ದೇಶ ಹೊಂದಿದ್ದೇವೆ.
1ಲಕ್ಷದ 18 ಸಾವಿರ ಕೋಟಿ ಆದಾಯದ ಗುರಿ ಹೊಂದಿದ್ದೇವೆ. ಸರಕು ಸಾಗಣೆ ದರ ಏರಿಕೆ ಸುಳಿವು ನೀಡಿದ ಪ್ರಭು…
ಹಿಂದಿನ ವರ್ಷಕ್ಕಿಂತ ಶೇ.10ರಷ್ಟು ಆದಾಯದ ಹೆಚ್ಚಳದ ಗುರಿ. ಬಂಡವಾಳ ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದ್ದೇವೆ.
ರೈಲ್ವೆಯ ಪುನರ್ ಸಂಘಟನೆಯ ಅಗತ್ಯವಿದೆ. ಈ ಬಾರಿ 1.21 ಲಕ್ಷ ಕೋಟಿ ರೂಪಾಯಿ ಹೂಡಲು ನಿರ್ಧರಿಸಲಾಗಿದೆ. ಖಾಸಗಿ ಸರ್ಕಾರಿ ಸಹಭಾಗಿತ್ವದೊಂದಿಗೆ ಹೂಡಿಕೆಗೆ ನಿರ್ಧಾರ.

Write A Comment