ರಾಷ್ಟ್ರೀಯ

ಚಳವಳಿ ಹೆಸರಲ್ಲಿ ಆಸ್ತಿಹಾನಿ, ಸುಲಿಗೆ ಸಹಿಸಲಾಗದು- ಸುಪ್ರೀಂ

Pinterest LinkedIn Tumblr

24-supreme-hardik-2-webನವದೆಹಲಿ: ಚಳವಳಿಗಳ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ವ್ಯಕ್ತಿಗಳು ಅಥವಾ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ‘ಯಾವುದೇ ಚಳವಳಿಯ ಹೆಸರಿನಲ್ಲಿ ರಾಷ್ಟ್ರದ ಆಸ್ತಿಪಾಸಿಗಳನ್ನು ಸುಟ್ಟು ಹಾಕುವುದು ಮತ್ತು ರಾಷ್ಟ್ರದ ಸುಲಿಗೆ ಮಾಡಲು ನಾವು ಬಿಡುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿತು.

ತಮ್ಮ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ಪಟೇಲ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಮನವಿಯ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು.

ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಪಡಿಸುವುದು ಅಥವಾ ನಾಶ ಪಡಿಸುವ ವ್ಯಕ್ತಿಗಳನ್ನು ಶಿಕ್ಷಿಸಲು ತಾನು ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದಾಗಿ ಹೇಳಿದ ಪೀಠವು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದವರು ಅಥವಾ ನಾಶ ಪಡಿಸಿದ ವ್ಯಕ್ತಿಗಳು ದಂಡ ತೆರಬೇಕಾಗುತ್ತದೆ ಎಂದು ತಿಳಿಸಿತು.

ವ್ಯಕ್ತಿಗಳಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ ಅಥವಾ ಬೇರಾವುದೇ ರಾಜಕೀಯ ಪಕ್ಷವಾದರೂ ನಾವು ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

Write A Comment