ಮನೋರಂಜನೆ

ಅಹಿಂಸೆ ಮತ್ತು ಶಾಂತಿಯ ಮೊರೆ ಹೋಗುವಂತೆ ಜಾಟ್ ಸಮುದಾಯಕ್ಕೆ ಮಲ್ಲಿಕಾ ಶೆರಾವತ್ ಮನವಿ

Pinterest LinkedIn Tumblr

mallika-sherawat

ಮುಂಬೈ: ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಹರ್ಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಾಟ್ ಸಮುದಾಯಕ್ಕೆ ಶಾಂತಿ ಕಾಪಾಡುವಂತೆ ನಟಿ ಮಲ್ಲಿಕಾ ಶೆರಾವತ್ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋರಿ ಜಾಟ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸೆಯ ರೂಪ ಪಡೆದಿದ್ದು ಇಲ್ಲಿಯವರೆಗೂ ೧೬ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹರ್ಯಾಣದ ಹಿಸರ್ ಮೂಲದ ‘ಮರ್ಡರ್’ ನಟಿ ಟ್ವಿಟ್ಟರ್ ಮೂಲಕ ಈ ಮನವಿ ಮಾಡಿದ್ದಾರೆ.

“ಶಾಂತಿ ಮತ್ತು ಅಹಿಂಸೆ ಕಾಪಾಡುವಂತೆ ಜಾಟ್ ಸಮುದಾಯದಲ್ಲಿ ಮನವಿ ಮಾಡುತ್ತೇನೆ” ಎಂದು ಮಲ್ಲಿಕಾ ಟ್ವೀಟ್ ಮಾಡಿದ್ದಾರೆ. ಜಾಟ್ ಸಮುದಾಯದ ಮತ್ತೊಬ್ಬ ನಟ ರಣದೀಪ್ ಹೂಡಾ ಕೂಡ ಕಳೆದ ವಾರ ಶಾಂತಿಯುತ ಮತ್ತು ಅಹಿಂಸಾತ್ಮಕ ಪ್ರತಿಭಟನೆ ನಡೆಸಲು ಕೋರಿದ್ದರು.

Write A Comment