ಮನೋರಂಜನೆ

ಬರ ಪೀಡಿತರ ಸಹಾಯಕ್ಕೆ ಮುಂದಾದ ಸಚಿನ್ ತೆಂಡೂಲ್ಕರ್

Pinterest LinkedIn Tumblr

sachin

ಮುಂಬೈ: ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿ ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮುಂದಾಗಿದ್ದಾರೆ.

ಈ ಸಂಬಂಧ ತೆಂಡೂಲ್ಕರ್ ಆಪ್ತ ಕಾರ್ಯದರ್ಶಿ ನಾರಾಯಣ್ ಕನ್ಹಾನ್ ಅವರು ಬೀಡ್ ಜಿಲ್ಲೆಗೆ ಭೇಟಿ ನೀಡಿದ್ದು, ಅಲ್ಲಿನ ಕಲೆಕ್ಟರ್ ನವಾಲ್ ಕಿಶೋರ್ ಮತ್ತು ಇತರರ ಬಳಿ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಸ್ವತಂತ್ರವಾಗಿ ರೈತರಿಗೆ ಸಹಾಯ ಮಾಡಬೇಕೆಂದಿದ್ದಾರೆ ಎಂದು ಕನ್ಹಾನ್ ಹೇಳಿದ್ದಾರೆ. ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ರೈತರ ನೆರವಿಗೆ ಮುಂದಾಗಿದ್ದಾರೆ ಎಂದು ಕಲೆಕ್ಟರ್ ಸ್ಪಷ್ಟಪಡಿಸಿದ್ದಾರೆ.

ತೆಂಡೂಲ್ಕರ್ ಬರ ಪೀಡಿತ ಪ್ರದೇಶಗಳಲ್ಲಿನ ಜನರಿಗಾಗಿ ನೀರಾವರಿ ಸೌಲಭ್ಯ, ವಿದ್ಯುತ್ ಪೂರೈಕೆ, ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ ಮಾಡುವ ಆಶಯ ಹೊಂದಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮರಾಠವಾಡ ಪ್ರಾಂತ್ಯದಲ್ಲಿ ಬರ ಮತ್ತು ಸಾಲಭಾದೆಯಿಂದ ನೊಂದಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪ್ರಮುಖ ವ್ಯಕ್ತಿಗಳು ರೈತರ ಸಹಾಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತು ಮರಾಠಿ ನಟ ಮಕರಂದ್ ಅನಾಸ್ ಪುರ್ ಸಹಾಯ ಮಾಡುತ್ತಿದ್ದಾರೆ.

Write A Comment