ಪಾಟ್ನಾ: ದೇಶದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಪೋಷಕರಿಗೆ ಬಿಹಾರ ಸರ್ಕಾರ ಪೊಲೀಸ್ ಭದ್ರತೆ ಒದಗಿಸಿದೆ.
ಫೆ.17 ರಂದು ದೆಹಲಿ ನ್ಯಾಯಾಲಯದಲ್ಲಿ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆದ ನಂತರ ಬಿಹಾರದ ಬೆಗುಸರೈನಲ್ಲಿರುವ ಆತನ ಪೋಷಕರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಎನ್ ಯು ನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಕನ್ಹಯ್ಯ ಕುಮಾರ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತ ಬೆಗುಸರೈ ನಲ್ಲಿರುವ ಬಿಹಾರ ಪೊಲೀಸರು ಅಲ್ಲಿನ ಸ್ಥಳಿಯ ಅಧಿಕಾರಿಗಳಿಗೆ ಕನ್ಹಯ್ಯ ಕುಮಾರ್ ಪೋಷಕರಿಗೆ ಭದ್ರತೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.