ಇಸ್ಲಾಮಾಬಾದ್: ಕಾರ್ಗಿಲ್ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿ ಅಂದಿನ ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬೆನ್ನಿಗೆ ಚೂರಿ ಇರಿದಂತೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ.
1999ರ ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಪಾಕಿಸ್ತಾನ, ಕಾರ್ಗಿಲ್ ದಾಳಿ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಬಾದ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, “ಅಟಲ್ ಬಿಹಾರಿ ವಾಜಪೇಯಿ ಅವರು ಎರಡೂ ದೇಶಗಳ ನಡುವಿನ ಬಾ೦ಧವ್ಯ ವೃದ್ಧಿಗೆ ಶ್ರಮಿಸುತ್ತಿದ್ದ ಸಂದರ್ಭದಲ್ಲೇ ಪಾಕಿಸ್ತಾನ ಸೇನೆಯ ಅ೦ದಿನ ಮುಖ್ಯಸ್ಥ ಪವೇ೯ಜ್ ಮುಷರಫ್ ಕಾಗಿ೯ಲ್ ಮೇಲೆ ಆಕ್ರಮಣ ಮಾಡಿಸಿದ್ದರು. ಆಗಷ್ಟೇ ಶಾ೦ತಿ ಮಾತುಕತೆಯ ಹಾದಿಯಲ್ಲಿದ್ದ ಎರಡೂ ದೇಶಗಳ ನಡುವಿನ ಬಾ೦ಧವ್ಯದ ಪ್ರಯತ್ನಕ್ಕೆ ಕೈಹಾಕಿದ್ದ ವಾಜಪೇಯಿ ಅವರಿಗೆ ಈ ದಾಳಿ ತೀವ್ರ ಆಘಾತವನ್ನು೦ಟುಮಾಡಿತ್ತು ಎ೦ದು ಹೇಳಿದ್ದಾರೆ.
‘ಉಭಯ ದೇಶಗಳ ನುಡುವಿನ ಶಾಂತಿ ಮಾತುಕತೆ ಕುರಿತು ವಾಜಪೇಯಿ ಅವರು ಪಾಕಿಸ್ತಾನದ ಮೇಲೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಕಾರ್ಗಿಲ್ ದಾಳಿಯು ಎರಡೂ ದೇಶಗಳ ನಡುವಿನ ಶಾಂತಿ ಒಪ್ಪಂದ ಮತ್ತು ಮಾತುಕತೆಗೆ ತೀವ್ರ ಹಿನ್ನಡೆ ಉಂಟುಮಾಡಿತ್ತು. ಇದರಿಂದ ಉಭಯ ದೇಶಗಳ ಸೌಹಾರ್ದತೆಗೆ ತೀವ್ರ ಭಂಗವಾಯಿತು. ಇದಕ್ಕಾಗಿ ನನಗೆ ವಿಷಾದವಿದೆ. ಆದರೆ ಆ ಸಮಯದಲ್ಲಿ ವಾಜಪೇಯಿಯವರು ಅಂತಹ ಕ್ಲಿಷ್ಟ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ್ದರು. ಕಾರ್ಗಿಲ್ ಅನ್ನು ಮರಳಿ ವಾಪಸ್ ಪಡೆಯುವಲ್ಲಿ ಅವರ ನಡೆ ಸರಿಯಾಗಿತ್ತು’ ಎಂದು ಷರೀಫ್ ಹೇಳಿದ್ದಾರೆ.
1999ರಲ್ಲಿ ನಡೆದ ಈ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ಭಾರತಕ್ಕೆ ಸೇರಿದ್ದ ಕಾರ್ಗಿಲ್ ಗುಡ್ಡವನ್ನು ವಶಪಡಿಸಿಕೊಂಡಿದ್ದವು. ಆಗ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ್ದ ಭಾರತೀಯ ಸೇನೆ ಕಾರ್ಗಿಲ್ ಅನ್ನು ಮರಳಿ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಭೀಕರ ಹೋರಾಟದಲ್ಲಿ ನೂರಾರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಆ ಸಂದರ್ಭದಲ್ಲಿ ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿದ್ದರು.
ನವಾಜ್ ಷರೀಫ್ ಗೆ ದಾಳಿ ಸಂಚು ಗೊತ್ತಿತ್ತು
ಇದೇ ವೇಳೆ ಕಾರ್ಗಿಲ್ ದಾಳಿ ಸಂಚು ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ತಿಳಿದಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪಾಕಿಸ್ತಾನ ವಾಯು ಸೇನೆಯ ತೊಫೈಲ್ ಎ೦ಬ ಅಧಿಕಾರಿ ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ ಈ ವಿಷಯ ಬಹಿರ೦ಗಪಡಿಸಿದ್ದಾರೆ. ಕಾಗಿ೯ಲ್ ಅತಿಕ್ರಮಣದ ವಿಚಾರವನ್ನು ನವಾಜ್ ಶರೀಫ್ ಗೆ ಮುಷರಫ್ ವಿವರಿಸಿದಾಗ “ಜನರಲ್ ಸಾಬ್ ಬಿಸ್ಮಿಲ್ಲಾ ಕರೇ೦…'(ಒಳ್ಳೆಯದಾಗಲಿ) ಎ೦ದಿದ್ದರು ಎ೦ಬುದಾಗಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ಬಗ್ಗೆ 2007ರಲ್ಲಿ ಮಾತನಾಡಿದ್ದ ನವಾಜ್ ಷರೀಫ್ ಕಾಗಿ೯ಲ್ ದಾಳಿಯ ಕುರಿತು ನನಗೇನೂ ಗೊತ್ತಿರಲಿಲ್ಲ. ಮುಷರಫ್ ಯೋಜನೆಯ ಕುರಿತು ನನಗೆ ಮಾಹಿತಿಯಿರಲಿಲ್ಲ ಎ೦ದಿದ್ದರು. ಅಲ್ಲದೇ ಆ ಸ೦ದಭ೯ದಲ್ಲಿ ಮುಷರಫ್ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ನನಗೆ ವಿಷಾದವಿದೆ ಎ೦ದೂ ಹೇಳಿದ್ದರು.