ರಾಷ್ಟ್ರೀಯ

ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ

Pinterest LinkedIn Tumblr

Shatrughan Sinha

ಮುಂಬೈ: ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಮಾಡಿದ ಟ್ವೀಟ್ ಈಗ ಚರ್ಚಾಸ್ಪದವಾಗಿದೆ.

ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದ ಸಿನ್ಹಾ, ನಮ್ಮ ಬಿಹಾರದ ಹುಡುಗ ಜೆಎನ್‌ಯು ಎಸ್‌ಯು ಅಧ್ಯಕ್ಷ ಕನಯ್ಯಾ ಅವರ ಭಾಷಣವನ್ನು ನಾನು ಕೇಳಿದ್ದೇನೆ. ಆತ ದೇಶ ವಿರೋಧಿ ಅಥವಾ ಅಸಂವಿಧಾನಿಕವಾದ ಮಾತುಗಳನ್ನು ಯಾವುದೂ ಹೇಳಲಿಲ್ಲ ಎಂದಿದ್ದಾರೆ.

ಈ ಟ್ವೀಟ್‌ನ ಬೆನ್ನಲ್ಲೇ, ಆತ ಆದಷ್ಟು ಬೇಗ ಬಂಧ ಮುಕ್ತನಾಗಲಿ. ಆತ ಬೇಗನೆ ಬಂಧಮುಕ್ತನಾಗಲೆಂದು ನಾನು ಆಶಿಸುತ್ತೇನೆ ಎಂಬ ಟ್ವೀಟ್‌ನ್ನೂ ಸಿನ್ಹಾ ಮಾಡಿದ್ದಾರೆ. ಪೊಲೀಸ್ ಬಂಧನದಲ್ಲಿರುವ ಕನಯ್ಯಾ ಅವರನ್ನು ಬುಧವಾರ ದೆಹಲಿ ಹೈಕೋರ್ಟ್‌ಗೆ ಹಾಜರು ಪಡಿಸಲಾಗುವುದು.

Write A Comment