ರೂರ್ಕೆಲಾ: ಒಡಿಶಾದ ರೂರ್ಕೆಲಾ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರನ್ನು ಭದ್ರತಾ ಸಿಬ್ಬಂದಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಬಂಧಿತ ಉಗ್ರರನ್ನು ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ (ಸಿಮಿ) ಉಗ್ರ ಸಂಘಟನೆಗೆ ಸೇರಿದ ಉಗ್ರರೆಂದು ಹೇಳಲಾಗುತ್ತಿದ್ದು, ನಿನ್ನೆ ತಡರಾತ್ರಿ ನಡೆದ ಸುಧೀರ್ಘ ದಾಳಿಯ ನಂತರ ಇದೀಗ ಸೇನಾ ಸಿಬ್ಬಂದಿ ನಾಲ್ವರು ಉಗ್ರರನ್ನು ಸಜೀವವಾಗಿ ಬಂಧನಕ್ಕೊಳಪಡಿಸಿದ್ದಾರೆ.
ರೂರ್ಕೆಲಾ ಪ್ರದೇಶದಲ್ಲಿ ಅಡಗಿ ಕುಳಿತು ದಾಳಿ ಮಾಡುತ್ತಿದ್ದ, ಉಗ್ರರನ್ನು ಸದೆ ಬಡಿಯುವ ಸಲುವಾಗಿ ಒಡಿಶಾ ಪೊಲೀಸರು, ವಿಶೇಷ ಕಾರ್ಯಾಚರಣಾ ತಂಡ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಇದರಂತೆ ಇದೀಗ ನಾಲ್ವರು ಉಗ್ರರನ್ನು ಬಂಧಿಸುವಲ್ಲಿ ಸೇನಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಉಗ್ರರ ಬಳಿಯಿದ್ದ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಂಧನಕ್ಕೊಳಗಾಗಿರುವ ಉಗ್ರನ್ನು ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ವಿಚಾರಣೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.