ರಾಷ್ಟ್ರೀಯ

ಸರ್ದಾರ್ ಜೋಕ್ ತಡೆ: ಮಾರ್ಗಸೂಚಿಗೆ ಸುಪ್ರೀಂ ಕೋರ್ಟ್ ನಿರ್ಧಾರ

Pinterest LinkedIn Tumblr

Suprim-court

ನವದೆಹಲಿ: ಸರ್ದಾರ್ ಜೋಕ್ ಗಳು ಸಿಖ್ ಜನಾಂಗೀಯ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಕೆಲವು ಮಾರ್ಗಸೂಚಿ ಜಾರಿಗೆ ತರಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಸರ್ದಾರ್‌ ಜೋಕ್‌ಗಳನ್ನು ನಿಷೇಧಿಸಿ ಎಂದು ದೆಹಲಿಯ ಗುರುದ್ವಾರ ಸಮಿತಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠ, ಜನಾಂಗೀಯ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ‘ಸರ್ದಾರ್‌ ಜೋಕ್‌’ಗಳು ಅಂತರ್ಜಾಲದಲ್ಲಿ ಹರಡದಂತೆ ತಡೆಯಲು ಕೆಲವು ಮಾರ್ಗಸೂಚಿ ಜಾರಿಗೆ ತರಲಾಗುವುದು ಎಂದು ಹೇಳಿದೆ. ಅಲ್ಲದೇ, ಅಗತ್ಯ ಮಾರ್ಗಸೂಚಿಗಳನ್ನು ಸಲ್ಲಿಸಲು ಅದನ್ನು ಪ್ರತಿನಿಧಿಸುವ ವಕೀಲರಾದ ಆರ್‌.ಎಸ್.ಸೂರಿ ಹಾಗೂ ಎಪಿಎಸ್ ಅಹ್ಲುವಾಲಿಯಾ ಅವರಿಗೆ ನ್ಯಾಯಪೀಠ ಸೂಚಿಸಿದೆ.

ನ್ಯಾಯಾಂಗದೊಳಗೆ ಯಾವ್ಯಾವ ಕ್ರಮ ಕೈಗೊಳ್ಳಲು ಸಾಧ್ಯವಿದೆಯೋ ಅದನ್ನು ಕೈಗೊಳ್ಳಲು ಸಿದ್ಧ. ಆದರೆ, ಸರ್ದಾರ್ ಜೋಕ್ ಗಳನ್ನು ಹರಡಬೇಡಿ ಎಂದರೇ ಅದು ಸಾಧ್ಯವೇ? ಅಥವಾ ನಿಮ್ಮ ಸಹೋದ್ಯೋಗಿಗಳೇ ಹಾಸ್ಯ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೇಯೇ? ಎಂದು ಪ್ರಶ್ನಿಸಿದ ನ್ಯಾಯಾಮೂರ್ತಿಗಳು, ಆದರೆ, ಇದನ್ನು ತಡೆಯಲು ಕೆಲ ಮಾರ್ಗಸೂಚಿಗಳನ್ನು ತರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment