ರಾಷ್ಟ್ರೀಯ

ನಾಪತ್ತೆಯಾಗಿದ್ದ ಸ್ನ್ಯಾಪ್​ಡೀಲ್ ಉದ್ಯೋಗಿ 2 ದಿನಗಳ ನಂತರ ಪತ್ತೆ

Pinterest LinkedIn Tumblr

deepti-webನವದೆಹಲಿ: ಬುಧವಾರ ರಾತ್ರಿ ಕಣ್ಮರೆಯಾಗಿದ್ದ ದೀಪ್ತಿ ಸರ್ನಾ ಶುಕ್ರವಾರ ಬೆಳಗ್ಗೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ತನ್ನ ಕುಟುಂಬ ಸೇರಿಕೊಂಡಿದ್ದಾರೆ.

ಶುಕ್ರವಾರ ಮುಂಜಾನೆ 7 ಗಂಟೆ ಸುಮಾರಿಗೆ ಹರಿಯಾಣದಲ್ಲಿ ವಾಸವಿರುದ ತಂದೆಗೆ ಪೋನ್ ಮಾಡಿ ದುಃಖ ತಪ್ತ ಧ್ವನಿಯಲ್ಲಿ ‘ದಯವಿಟ್ಟು ರೈಲ್ವೆ ನಿಲ್ದಾಣಕ್ಕೆ ಬಂದು ನನನ್ನು ಕರೆದುಕೊಂಡು ಹೋಗಿ’ ಎಂದಿದ್ದಾರೆ. ವಿಷಯ ತಿಳಿದು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ತಂದೆ ಮತ್ತು ಸಹೋದರ ದೀಪ್ತಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಕಾಣೆಯಾಗಿರುವುದಕ್ಕೆ ಇನ್ನೂ ಯಾವುದೇ ರೀತಿಯ ಸ್ಪಷ್ಟನೆ ದೊರೆತಿಲ್ಲ ಎನ್ನಲಾಗಿದೆ. ದಣಿದಿರುವುದರಿಂದ ಆಕೆಯನ್ನು ಪ್ರಶ್ನಿಸಲಾಗಿಲ್ಲ. ಈಗಾಗಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆಕೆಯ ಪೋನ್ ಕಾಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 8 ಗಂಟೆಗೆ ಗುರ್ಗಾಂವ್​ನಲ್ಲಿರುವ ಸ್ನ್ಯಾಪ್​ಡೀಲ್ ಕಂಪನಿಯಿಂದ ಆಟೋ ಹಿಡಿದು ಹೊರಟ ದೀಪ್ತಿ ತಂದೆಗೆ ಪೋನ್ ಮಾಡಿ ಎಂದಿನಂತೆ ತನ್ನನ್ನು ಪಿಕ್ ಮಾಡುವ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿರುವ ಸ್ನೇಹಿತಿಗೂ ದೀಪ್ತಿ ಪೋನ್ ಮಾಡಿದ್ದು, ಈ ಸಂದರ್ಭದಲ್ಲಿ ಯಾರದೋ ಜತೆ ಜಗಳವಾಡುವಂತೆ ಕೇಳಿಸುತ್ತಿತ್ತು ಎಂದು ಕರೆ ಸ್ವೀಕರಿಸಿದ ಗೆಳತಿ ಹೇಳಿದ್ದಾರೆ. ಅದಾದ ನಂತರ ದೀಪ್ತಿ ಕಾಣೆಯಾಗಿದ್ದರು. ಪೊಲೀಸರು ಈಗ ಆಟೋ ಚಾಲಕನ ಹುಡುಕಾಟದಲ್ಲಿದ್ದಾರೆ.

Write A Comment