ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವಷ್ಠೆ ರಾಮಮಂದಿರ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಕಲ್‌ರಾಜ್ ಮಿಶ್ರಾ ಸೋಮವಾರ ತಿಳಿಸಿದ್ದಾರೆ.
ಇದೇ ಮೊದಲ ಸಲ ಬಿಜೆಪಿಯ ಸಚಿವರೊಬ್ಬರು ರಾಮ ಮಂದಿರ ವಿಷಯ ಕುರಿತಂತೆ ಮಾತನಾಡಿದ್ದಾರೆ.
ಈಗಲೇ ರಾಮ ಮಂದಿರ ನಿರ್ಮಾಣ ವಿಷಯದ ಬಗ್ಗೆ ಮಾತನಾಡಲಾಗದು. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಲ್‌ರಾಜ್ ಮಿಶ್ರಾ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಆರ್‌ಎಸ್‌ಎಸ್ ವರಿಷ್ಠರ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಮೌನ ಮುರಿಯಬೇಕು ಎಂದು ಒತ್ತಡ ಹೇರಿದ್ದರು.