ರಾಷ್ಟ್ರೀಯ

ತುಂಡುಡುಗೆ ತೊಟ್ಟ ನಿರೂಪಕಿ ಜೊತೆ ಸಂದರ್ಶನ ನಿರಾಕರಿಸಿದ ಆಮ್ಲಾ!

Pinterest LinkedIn Tumblr

10ನವದೆಹಲಿ : ದಕ್ಷಿಣ ಆಫ್ರಿಕಾ ತಂಡದ ಮಾಜಿ ಟೆಸ್ಟ್‌ ನಾಯಕ ಹಾಶಿಮ್‌ ಆಮ್ಲಾ ಅವರು ತುಂಡುಡುಗೆ ತೊಟ್ಟಿದ್ದ ಕಾರಣಕ್ಕಾಗಿ ಭಾರತದ ನಿರೂಪಕಿಯೊಬ್ಬಳೊಂದಿಗೆ ಸಂದರ್ಶನ ನಿರಾಕರಿಸಿ ಸುದ್ದಿಯಾಗಿದ್ದಾರೆ.

ಎಬಿಪಿ ಲೈವ್‌ ವರದಿಯ ಪ್ರಕಾರ ತುಂಡುಡುಗೆ ಮತ್ತು ಕಡಿಮೆ ಕುತ್ತಿಗೆ ಯ ಟಾಪ್‌ ನೋಡಿ ಆಕೆಯೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಲು 32 ರ ಹರೆಯದ ಆಮ್ಲಾ ನಿರಾಕರಿಸಿದ್ದಾರೆ. ಸಂಘಟಕರ ಬಳಿ ಆಕೆ ಸಭ್ಯ ಉಡುಪು ಧರಿಸಿ ಬಂದರಷ್ಟೆ ಸಂದರ್ಶನ ನೀಡುವುದಾಗಿ ಹೇಳಿದ್ದಾರೆ.

ಕಟ್ಟಾ ಇಸ್ಲಾಂನ ಅನುಯಾಯಿಯಾಗಿರುವ ಆಮ್ಲಾ ಈ ಹಿಂದೆ ತಂಡದ ಜೆರ್ಸಿಯಲ್ಲಿ ಕ್ಯಾಟಲ್‌ ಬೀಯರ್‌ ಜಾಹಿರಾತನ್ನು ಪ್ರಕಟಿಸುವುದನ್ನು ವಿರೋಧಿಸಿದ್ದರು.
-ಉದಯವಾಣಿ

Write A Comment