ರಾಷ್ಟ್ರೀಯ

25ಕ್ಕೆ ರೈಲ್ವೆ, 29ಕ್ಕೆ ಸಾಮಾನ್ಯ ಬಜೆಟ್‌: 23ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭ

Pinterest LinkedIn Tumblr

venkaನವದೆಹಲಿ(ಪಿಟಿಐ): ಸಂಸತ್‌ನ ಬಜೆಟ್‌ ಅಧಿವೇಶನ ಫೆ. 23ರಿಂದ ಆರಂಭವಾಗಲಿದೆ. 25ರಂದು ರೈಲ್ವೆ ಬಜೆಟ್‌, 29ರಂದು ಸಾಮಾನ್ಯ ಬಜೆಟ್‌ ಮಂಡನೆಯಾಗಲಿವೆ.

ಗೃಹ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಫೆ. 23ರಂದು ಆರಂಭವಾಗುವ ಬಜೆಟ್‌ ಅಧಿವೇಶನದ ಮೊದಲ ಭಾಗ ಮಾರ್ಚ್‌ 16ರವರೆಗೆ ಮುಂದುವರೆಯಲಿದೆ. 23ರಂದು ರೈಲ್ವೆ, 29ರಂದು ಸಾಮಾನ್ಯ ಬಜೆಟ್‌ ಮಂಡನೆಯಾಗಲಿದೆ. ಈ ಮಧ್ಯೆ 26ರಂದು ಬಜೆಟ್‌ ಪೂರ್ವ ಸಮೀಕ್ಷೆ ನಡೆಯಲಿದೆ. ಅಧಿವೇಶನದ ಎರಡನೇ ಭಾಗ ಏ. 25ರಿಂದ ಮೇ 13ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

23ರಂದು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾಷಣ ಮಾಡಲಿದ್ದಾರೆ. ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಸಲಹೆಗಳು ಬಂದಿವೆ. ಆದರೆ, ಸರ್ಕಾರ ಅಧಿವೇಶನ ಮೊಟಕುಗೊಳಿಸದೇ ಪೂರ್ಣಗೊಳಿಸಲಿದೆ ಎಂದು ಅವರು ತಿಳಿಸಿದರು.

Write A Comment