ಚೆನ್ನೈ (ಪಿಟಿಐ): ಚಲಿಸುವ ರೈಲಿನ ಮುಂದೆ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಪ್ರಾಣತೆತ್ತಿರುವ ಘಟನೆ ನಡೆದಿದೆ.
ಇಲ್ಲಿನ ವಂದಲೂರು ಉಪ ನಗರದಲ್ಲಿ ಈ ಘಟನೆ ಜರುಗಿದೆ. ಮೃತ ಯುವಕನನ್ನು ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ದಿನೇಶ್ ಕುಮಾರ್ ಗೆಳೆಯನ ಜೊತೆ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವಾಗ ರೈಲು ಬರುತ್ತಿರುವುದನ್ನು ಗಮನಿಸಿ ಆ ರೈಲಿನ ಮುಂದೆ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ರೈಲು ದಿನೇಶ್ ಕುಮಾರ್ ಮೇಲೆ ಹರಿದಿದೆ.
ವಂದಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.