ಜೈಪುರ: ಗಣರಾಜ್ಯೋತ್ಸವದ ದಿನ ಪಾಕಿಸ್ತಾನದ ಗಡಿ ಪ್ರದೇಶದ ಬಳಿ ವಾಯುಪಡೆ ವಿಮಾನಗಳು ಹೊಡೆದುರುಳಿಸಿದ ಬಲೂನಿನ ಮಾದರಿ ವಸ್ತುವಿನಲ್ಲಿ ಯಾವುದೇ ಸ್ಪೋಟಕಗಳಿರಲಿಲ್ಲ ಮತ್ತು ಅಪಾಯಕಾರಿ ವಸ್ತುಗಳಿರಲಿಲ್ಲ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಮಾನ ಹೊಡೆದುರುಳಿಸಿದ ವಸ್ತುವಿನ ಅವಶೇಷಗಳನ್ನು ಪರಿಶೀಲಿಸಿದ ನಂತರ ಅದರಲ್ಲಿ ಯಾವುದೇ ಅಪಾಯಕಾರಿ ವಸ್ತುಗಳಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದು 3 ಮೀಟರ್ ವ್ಯಾಸದ ಬಲೂನ್ ಎಂಬುದು ಪರಿಶೀಲನೆಯಿಂದ ತಿಳಿದು ಬಂದಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಷ್ ಓಜಾ ತಿಳಿಸಿದ್ದಾರೆ.
ಜೈಸೆಲ್ಮೇರ್ ಪ್ರದೇಶದಲ್ಲಿ ಆಕಾಶದಲ್ಲಿ ಬಲೂನಿನಾಕಾರದ ವಸ್ತು ಹಾರಾಡುತ್ತಿರುವುದು ರೆಡಾರ್ನಲ್ಲಿ ತಿಳಿದು ಬಂದಿತು. ದೇಶಾದ್ಯಂತ ಹೈ ಅಲರ್ಟ್ ಘೊಷಿಸಿದ್ದ ಕಾರಣ ವಿಮಾನಗಳು ವಸ್ತುವನ್ನು ಹೊಡೆದುರುಳಿಸಿದ್ದವು.