ರಾಷ್ಟ್ರೀಯ

ಆಕಸ್ಮಿಕವಾಗಿ ಯುದ್ಧ ವಿಮಾನದಿಂದ ಜಾರಿ ರಾಜಸ್ತಾನದಲ್ಲಿ ಬಿದ್ದ ಬಾಂಬುಗಳು..!

Pinterest LinkedIn Tumblr

IAF-Fighter-jet-Barmerಬಾರ್ಮರ್: ಭಾರತೀಯ ವಾಯುಸೇನೆಗೆ ಫೈಟರ್ ಜೆಟ್ ಯುದ್ಧ ವಿಮಾನವೊಂದು ಮಂಗಳವಾರ ಆಕಸ್ಮಿಕವಾಗಿ ತನ್ನ ಬಾಂಬುಗಳನ್ನು ಜಾರಿಸಿದ ಘಟನೆ ಮಂಗಳವಾರ ರಾಜಸ್ತಾನದಲ್ಲಿ ನಡೆದಿದೆ.

ರಾಜಸ್ತಾನದ ಬಾರ್ಮರ್ ಜಿಲ್ಲೆಯ ಗುಗ್ಡಿ ಪಟ್ಟಣ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ಸೇನೆಯ ಯುದ್ಧ ವಿಮಾನದಲ್ಲಿ ಅಳವಡಿಸಲಾಗಿದ್ದ ಬಾಂಬುಗಳು ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಒಟ್ಟು ಐದು ಬಾಂಬುಗಳು ಕೆಳಗೆ ಬಿದ್ದಿದ್ದು, ಬಾಂಬುಗಳು ಬೀಳುತ್ತಿದ್ದಂತೆಯೇ ಭಾರಿ ಸದ್ದು ಉಂಟಾಗಿದ್ದು, ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಈ ಭಾರಿ ಸದ್ದು ಕೇಳಿದೆ. ಬಾಂಬುಗಳು ನಿರ್ಜನ ಪ್ರದೇಶದಲ್ಲಿ ಬಿದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಐಎಎಫ್ ಸೇನಾ ಮೂಲಗಳು ತಿಳಿಸಿವೆ.

ಇನ್ನು ಘಟನಾ ಸ್ಥಳಕ್ಕೆ ಈಗಾಗಲೇ ಐಎಎಫ್​ನ ತಜ್ಞರ ತಂಡ, ಸ್ಥಳೀಯ ಪೊಲೀಸ್ ತಂಡ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಐಎಎಫ್ ಅಧಿಕಾರಿಗಳು ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Write A Comment