ಅಂತರಾಷ್ಟ್ರೀಯ

ಇದು ಪರಿಸರ ಸ್ನೇಹಿ ಮೊಬೈಲ್ ಕಾರ್

Pinterest LinkedIn Tumblr

mobile-phones

ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ಥೈವಾನಿ ಕಲಾವಿದನೊಬ್ಬ ಸಾವಿರಾರು ಮರುಬಳಕೆ ಮಾ‌ಡುವ ಮೊಬೈಲ್ ಫೋನ್‌ಗಳನ್ನು ಬಳಸಿ ಸತತ ನಾಲ್ಕು ತಿಂಗಳುಗಳ ಕಾಲ ಶ್ರಮವಹಿಸಿ ನೂತನ ಮಾದರಿಯ ಕಾರನ್ನು ನಿರ್ಮಿಸಿದ್ದಾನೆ.

ಥೈವಾನಿ ಕಲಾವಿದ ಲಿನ್ ಶಿಹ್-ಪಾವೋ ಪರಿಸರ ಜಾಗೃತಿ ಮೂಡಿಸಲು ಹಾಗೂ ಇ-ತ್ಯಾಜ್ಯ ವಸ್ತುಗಳ ಮರುಬಳಕೆ ಮಾಡುವ ಬಗ್ಗೆ ನೂತನ ಯೋಜನೆ ರೂಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಜಗತ್ತಿನಲ್ಲಿ ಐದನೇ ಒಂದು ಭಾಗದಷ್ಟು ಇ-ತ್ಯಾಜ್ಯದ ವಸ್ತುಗಳಿಂದ ಪರಿಸರಕ್ಕೆ ಮಾರಕವಾಗುತ್ತಿದೆ ಎಂಬುದನ್ನು ಮನಗಂಡಿರುವ ಲಿನ್ ಶಿಬ್ ಯಾರಿಗೂ ಬೇಡವಾದ ಉಪಯೋಗಿಸಿ ಎಸೆಯುವ ಮೊಬೈಲ್ ಫೋನ್‌ಗಳನ್ನು ಒಗ್ಗೂಡಿಸಿಕೊಂಡು ರೋಡ್ ಸ್ಟಾರ್ ಕಾರೊಂದನ್ನು ನಿರ್ಮಿಸಿದ್ದಾರೆ.

ಇ-ತ್ಯಾಜ್ಯಗಳಿಂದ ಯಾವ ರೀತಿಯ ಅದ್ಭುತ ಕಲೆಯನ್ನು ಜನರಿಗೆ ಪ್ರದರ್ಶಿಸಬಹುದು. ಅವುಗಳನ್ನು ಯಾವ ರೀತಿ ಮರುಬಳಕೆ ಮಾಡಬಹುದು. ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಶೈಲಿಯಲ್ಲಿ ಜನರಿಗೆ ಪರಿಚಯಿಸಿ ಅವರ ಗಮನ ಸೆಳೆಯುವುದು ನನ್ನ ಈ ಯೋಜನೆಯ ಉದ್ದೇಶ ಎಂದು ಲಿನ್ ಶಿಹ್ ತಿಳಿಸಿದ್ದಾರೆ.

53 ವರ್ಷದ ಲಿನ್ ಶಿಹ್ ನಾಲ್ಕು ವರ್ಷಗಳ ಕಾಲ ವಿವಿಧ ಕಡೆ ಪ್ರಯಾಣ ಬೆಳಸಿ ಸುಮಾರು 19.5 ಲಕ್ಷ ರೂ.ಗಳನ್ನು ಖರ್ಚು ಮಾಡಿ 25 ಸಾವಿರಕ್ಕೂ ಅಧಿಕ ಹಳೆಯ ಮೊಬೈಲ್‌ಗಳನ್ನು ರೋಡ್ ಸ್ಟಾರ್ ಕಾರು ನಿರ್ಮಿಸಲು ವ್ಯಯಿಸಿದ್ದಾರೆ.

ನಂತರ ಕಾರಿನ ಆಕೃತಿಯ ಮರದ ಚೌಕಟ್ಟನ್ನು ನಿರ್ಮಿಸಿ ಅಂಟಿನ ಪದಾರ್ಥವನ್ನು ಬಳಕೆ ಮಾಡಿ ಅದಕ್ಕೆ 25 ಸಾವಿರದಷ್ಟು ಹಳೆಯ ಫೋನ್‌ಗಳನ್ನು ಜೋಡಣೆ ಮಾಡಿದ್ದಾರೆ.

ಇ-ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಕುರಿತಂತೆ ಜಾಗೃತಿ ಮೂಡಿಸುವುದೇ ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ ಎಂದು ಲಿನ್ ಶಿಹ್ ಹೇಳಿದ್ದಾರೆ.

ನಂತರ ತಾನು ವಿದ್ಯಾಭ್ಯಾಸ ಮಾಡಿದ ಶಾಲೆಯ ವಾರ್ಷಿಕೋತ್ಸವದಲ್ಲಿ ತಾನು ಸೃಷ್ಟಿಸಿದ ಕಾರನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೂ ಯಾರು ಹೆಚ್ಚು ಹಳೆಯ ಪೋನ್‌ಗಳನ್ನು ಸಂಗ್ರಹಿಸಿ ತರುತ್ತಾರೋ ಅವರನ್ನು ಮೊದಲ ಬಾರಿ ಈ ಕಾರಿನೊಳಗೆ ಕುಳಿತು ಪ್ರಯಾಣ ಮಾಡುವ ಅವಕಾಶ ನೀಡಲಾಗುವುದು ಎಂಬ ಮಾತನ್ನು ತಿಳಿಸಿದ್ದರು. ಇದರಿಂದ ವಿದ್ಯಾರ್ಥಿಯೊಬ್ಬ ಪ್ರೇರಣೆಗೊಂಡು 47 ಹಳೆಯ ಮೊಬೈಲ್‌ಗಳನ್ನು ಸಂಗ್ರಹಿಸಿ ಗಮನ ಸೆಳೆದನು.

ಈ ರೀತಿ ಕಾರು ನಿರ್ಮಿಸಿರುವುದು ಒಂದು ಮಾದರಿಯಷ್ಟೆ. 2006ರಲ್ಲಿ 10 ಲಕ್ಷ ಪೆನ್ನುಗಳನ್ನು ಬಳಸಿ `ಪೀಸ್ ಗೇಟ್’ ಎಂಬ ಕ್ರಿಸ್ಮಸ್ ಮರವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಲಿನ್ ಶಿಹ್-ಪಾವೋ ಅವರು.
ಸದ್ಯ ಹಲವು ಬಗೆಯ ಬ್ರ್ಯಾಂಡ್ ಫೋನ್‌ಗಳನ್ನು ಉಪಯೋಗಿಸಿ ಲಿನ್ ಶಿಹ್ ನಿರ್ಮಿಸಿರುವ ಕಾರನ್ನು ಥೈವಾನ್‌ನ ತೈಪೆ ಸಿಟಿ ಹಾಲ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

Write A Comment