ಅಂತರಾಷ್ಟ್ರೀಯ

ಸ್ಥಿರತೆ, ಭವಿಷ್ಯಕ್ಕಾಗಿ ತೆರಿಗೆ ಕಾಯ್ದೆ ಬದಲಾವಣೆ : ಅರುಣ್ ಜೇಟ್ಲಿ

Pinterest LinkedIn Tumblr

jetlyಸಿಂಗಪೂರ್, ಜ.21- ಉನ್ನತ ಮಟ್ಟದ ಸ್ಥಿರತೆ ಹಾಗೂ ಭವಿಷ್ಯಕ್ಕಾಗಿ ಭಾರತವು ತನ್ನ ತೆರಿಗೆ ಪದ್ಧತಿಗಳನ್ನು ನಿಧಾನವಾಗಿ ಬದಲಿಸಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಇಂದಿಲ್ಲಿ ಆರಂಭವಾದ 2 ದಿನಗಳ ಜಾಗತಿಕ ಸಮಾವೇಶಕ್ಕಾಗಿ ಕಳುಹಿಸಿರುವ ತಮ್ಮ ವೀಡಿಯೊ ಸಂದೇಶದಲ್ಲಿ ಈ ವಿಷಯ ತಿಳಿಸಿರುವ ಜೈಟ್ಲಿ, ದೇಶದ ಸ್ಥಿರತೆ ಹಾಗೂ ಭವಿಷ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತೆರಿಗೆ ವ್ಯವಸ್ಥೆಯ ಕಾಯ್ದೆಗಳನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ವ್ಯಾಪಾರ-ವಹಿವಾಟು, ಉದ್ದಿಮೆಗಳು ಸುಸೂತ್ರವಾಗಿ ನಡೆಸಲು ಅನುಕೂಲವಾಗಬೇಕು. ಉದ್ಯಮಿಗಳಿಗೆ ಯಾವುದೇ ಅಡೆ-ತಡೆಗಳು ಉಂಟಾಗಬಾರದು. ತೆರಿಗೆ ಕಾನೂನುಗಳು ಸರಳವಾಗಿದ್ದರೆ ಉದ್ಯಮ ಸ್ನೇಹಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವೆಗಳ ಮಸೂದೆ (ಜಿಎಸ್‌ಟಿ ಬಿಲ್) ಒಂದು ಪ್ರಮುಖ ಹೆಜ್ಜೆಯಾಗಿದೆ. ತೆರಿಗೆಯನ್ನೇ ಅವಲಂಬಿಸಿ ಉದ್ಯಮ ನಡೆಯುತ್ತದೆ ಎಂದು ಜೈಟ್ಲಿ ಹೇಳಿದ್ದಾರೆ.

Write A Comment