ಅಂತರಾಷ್ಟ್ರೀಯ

ನೇತಾಜಿ ಅಂತ್ಯಕ್ರಿಯೆ ಮಾಹಿತಿ ಬಹಿರಂಗ ಪಡಿಸಿದ ವೆಬ್ ಸೈಟ್

Pinterest LinkedIn Tumblr

netajifi

ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ 1945ರಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಸ್ವತಃ ತಾವೇ ಮಾಡಿರುವುದಾಗಿ ತೈವಾನ್​ನ ಅಧಿಕಾರಿ ನೀಡಿರುವ ವಿವರಗಳನ್ನು www.bosefile.info  ವೆಬ್ ತಾಣವು ಬಿಡುಗಡೆ ಮಾಡಿದೆ.

ತೈವಾನ್ ಅಧಿಕಾರಿ ಬಹಿರಂಗಗೊಳಿಸಿದ ಮಾಹಿತಿಗಳು ಬ್ರಿಟನ್​ನ ವಿದೇಶಿ ಕಾರ್ಯಾಲಯದಲ್ಲಿನ 1956ರಷ್ಟು ಹಳೆಯದಾದ ಫೈಲ್ ನಂ ಎಫ್​ಸಿ 1852/6ನಲ್ಲಿ ಇವೆ. 1945 ಅಗಸ್ಟ್ 8ರಂದು ನೇತಾಜಿ ತೈಪೆ ವಾಯುನೆಲೆಯ ಹೊರವಲಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಭಾರತದಿಂದ ಬಂದ ಇಬ್ಬರು ತನಿಖಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಪಡೆದಿದ್ದಾರೆ. 1956ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ವಿನಿಮಯ ಮಾಡಲಾಗಿದೆ ಎಂದು ವೆಬ್​ಸೈಟ್ ತಿಳಿಸಿದೆ.

ತೈಪೆಯಲ್ಲಿ ನೇತಾಜಿ ಅಂತ್ಯಕ್ರಿಯೆಗೆ ತಾವೆ ಸ್ವತಃ ಅನುಮತಿ ಪತ್ರ ನೀಡಿರುವುದಾಗಿ ತೈವಾನ್ ಅಧಿಕಾರಿ ತಾನ್ ತೀ ತೀ ಸಂದರ್ಶನವೊಂದರಲ್ಲಿ ಹೇಳಿದ್ದು, ಇದನ್ನು ವೆಬ್ ಸೈಟ್​ನಲ್ಲಿ ಪ್ರಕಟಿಸಲಾಗಿದೆ.

ನೇತಾಜಿ ಸಾವಿನ ಕುರಿತು ಈ ಹಿಂದೆ ಹಲವು ಉಹಾಪೋಹಗಳು ಎದ್ದಿದ್ದು, ಇಂದಿಗೂ ಕೂಡ ಸೂಕ್ತ ದಾಖಲೆಯಿಲ್ಲದೆ ಇರುವುದರಿಂದ ಸಾವು ಇನ್ನೂ ನಿಗೂಢವಾಗಿಯೇ ಉಳಿದಿದೆ.

Write A Comment