ಅಂತರಾಷ್ಟ್ರೀಯ

ಅತ್ಯಂತ ಹೆಚ್ಚು ಸೆಖೆ ಇದ್ದ ವರ್ಷ 2015!: ಈ ದಾಖಲೆ ಮುರಿಯಲು ಸಜ್ಜಾಗಿದೆ 2016!

Pinterest LinkedIn Tumblr

Hot-yearವಾಷಿಂಗ್ಟನ್: ಭೂಮಿಯ ಉಷ್ಣತೆ ದಿನೇ ದಿನೆ ಹೆಚ್ಚಾಗುತ್ತಿರುವ ದಿನಗಳಲ್ಲಿ ಮತ್ತೊಂದು ಆಘಾತಕಾರಿ ಸಂಶೋಧನಾ ವರದಿ ಪ್ರಕಟಗೊಂಡಿದೆ. 2015 ಅತ್ಯಂತ ಹೆಚ್ಚು ಉಷ್ಣಂಶ ದಾಖಲಾದ ವರ್ಷ ಎಂದು ಅಮೆರಿಕದ ಸಮುದ್ರ ಮತ್ತು ಹವಾಮಾನ ಅಧ್ಯಯನ ಆಡಳಿತ ಸಂಸ್ಥೆ ತಿಳಿಸಿದೆ. ಕಳೆದ 135 ವರ್ಷಗಳಲ್ಲಿ ಅಂದರೆ 1880ರ ನಂತರ ಅತಿ ಹೆಚ್ಚು ಉಷ್ಣಂಶ ಹೊಂದಿದ ವರ್ಷ 2015. ಹೆಚ್ಚಿನ ಉಷ್ಣತೆ ಹೊಂದಿದ್ದ ವರ್ಷ ಎಂಬ ಕುಪ್ರಸಿದ್ಧಿ ಹೊಂದಿದ್ದ 2014ರ ದಾಖಲೆಯನ್ನು 2015 ಅಳಿಸಿಹಾಕಿದೆ.

ನಾಸಾದ ಉಪಗ್ರಹ ಸೇರಿದಂತೆ ಜಗತ್ತಿನಾದ್ಯಂತ ಇರುವ ಹವಾಮಾನ ಕೇಂದ್ರಗಳ ಮಾಹಿತಿಯನ್ನು ಆಧರಿಸಿದ ವರದಿ ಇದಾಗಿದ್ದು, ಈ ನಿಟ್ಟಿನಲ್ಲಿ ಜಾಗತಿಕ ತಾಪಮಾನ ತಡೆಗೆ ಹೆಚ್ಚಿನ ಒತ್ತು ನೀಡಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ. ತಾಪಮಾನ ತಡೆಯುವ ನಿಟ್ಟಿನಲ್ಲಿ ಗಂಭೀರವಾಗಿ ಹೆಜ್ಜೆ ಇರಿಸದಿದ್ದಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಯನಕಾರರು ಎಚ್ಚರಿಸಿದ್ದಾರೆ.

ಈಗಾಗಲೇ ಉಷ್ಣತೆ ಹೆಚ್ಚುತ್ತಿರುವ ಪರಿಣಾಮ ಹಿಮಪದರಗಳು ಕರಗುತ್ತಿವೆ. ಪೋಲೆಂಡ್, ಐಲೆಂಡ್​ಗಳ ಹಿಮಸಮುದ್ರದ ಹಿಮಗಡ್ಡೆಗಳು ನೀರಾಗುತ್ತಿವೆ. ಇದರಿಂದ ಸಮುದ್ರ ಮಟ್ಟ ಏರುತ್ತಿದೆ. ಅತಿವೃಷ್ಟಿ, ಚಂಡಮಾರುತಗಳ ಸರಣಿಗೆ ಕಾರಣವಾಗುತ್ತಿದೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2016 ಈವರೆಗಿನ ಎಲ್ಲಾ ‘ಸೆಕೆ ದಾಖಲೆ’ಗಳನ್ನೂ ಮುರಿಯಬಹುದು ಎನ್ನಲಾಗುತ್ತಿದೆ.

Write A Comment