ಜೋದ್ಪುರ: ರಾಜಸ್ಥಾನದ ಮೆಹರಾನ್ಗಢ ದುರ್ಗಕ್ಕೆ ಸ್ನೇಹಿತರು ಹಾಗೂ ಸಹೋದರರೊಂದಿಗೆ ತೆರಳಿದ ನಿಖಿಲ್ ಪ್ರಜಾಪತಿ ಎಂಬ ಯುವಕ ಸೆಲ್ಫಿ ತೆಗೆಯುವ ಆತುರದಲ್ಲಿ ಕಾಲುಜಾರಿ 400 ಅಡಿ ಆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೇಲಿ ದಾಟಿದ ಯುವಕ ಮುಂದಕ್ಕೆ ಸಾಗಿ ಸೆಲ್ಫಿ ತೆಗೆಯವಾಗ ಕಾಲು ಜಾರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಖಲ್ಗೆ ವಿವಾಹ ನಿಶ್ಚಯವಾಗಿದ್ದು, ಇನ್ನು ಮದುವೆಗೆ ಕೇವಲ ಹತ್ತು ದಿನ ಬಾಕಿ ಇತ್ತು.