ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಸಾಗಾಣಿಕೆ ಮಾಡುತ್ತಿದ್ದ ಬಾಂಗ್ಲಾ ಪ್ರಜೆ ಬಂಧನ

Pinterest LinkedIn Tumblr

fake-noteಕೋಲ್ಕತ್ತಾ: ಭಾರತೀಯ ನಕಲಿ ನೋಟುಗಳನ್ನು ಸಾಗಣೆ ಮಾಡುತ್ತಿದ್ದ ಬಾಂಗ್ಲಾ ಪ್ರಜೆಯೊಬ್ಬನನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್ ನಲ್ಲಿ ಬಂಧಿಸಲಾಗಿದೆ.

ಬಂಧಿತ ಬಾಂಗ್ಲಾ ಪ್ರಜೆ 8 ಲಕ್ಷ ರೂ ಮೊತ್ತದ ಕಳ್ಳ ನೋಟುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಂ.32 ರ ಬಳಿ ಇರುವ ಕಾಲಿಯಾಚಕ್ ಮಾರ್ಕೆಟ್ ನಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದಾಗ ಅನ್ವರುಲ್ ಇಸ್ಲಾಂ ನನ್ನು ಗಡಿ ಭದ್ರತಾ ಪಡೆಯ ಅಧಿಕಾರಿಗಳು ಬಂಧಿಸಿದ್ದಾರೆ.

1 ,000 ರೂಪಾಯಿ ಮುಖಬೆಲೆಯ 400 ನಕಲಿ ನೋಟು, 500 ರೂಪಾಯಿ ಮುಖಬೆಲೆಯ 800 ನಕಲಿ ನೋಟುಗಳನ್ನು ಈತ ಸಾಗಾಣಿಕೆ ಮಾಡುತ್ತಿದ್ದ. ನಕಲಿ ನೋಟುಗಳ ಜೊತೆ ಬಂಧಿತನಿಂದ 2 ಮೊಬೈಲ್ ಫೋನು, ಒಂದು ಪಾಸ್ ಪೋರ್ಟ್ ನ್ನು ವಶಪಡಿಸಿಕೊಳ್ಳಲಾಗಿದ್ದು ಬಿಎಸ್ ಎಫ್ ಯೋಧರು ಬಂಧಿತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Write A Comment