ಅಹ್ಮದಾಬಾದ್, ಜ.18-ಪ್ರಧಾನಿನರೇಂದ್ರ ಮೋದಿ ಅವರೂ ಒಬ್ಬ ಟ್ರಸ್ಟಿಯಾಗಿರುವ ಇಲ್ಲಿನ ಸೋಮನಾಥ ದೇವಸ್ಥಾನ ಸಮಿತಿ ತನ್ನಲ್ಲಿ ಅನುಪಯುಕ್ತವಾಗಿ ಬಿದ್ದಿರುವ 35 ಕೆಜಿಗೂ ಹೆಚ್ಚು ಚಿನ್ನವನ್ನು ಕೇಂದ್ರ ಸರ್ಕಾರದ ಚಿನ್ನದ ಠೇವಣಿ ಯೋಜನೆಯ (ಗೋಲ್ಡ್ ಬಾಂಡ್ ಸ್ಕೀಮ್)ಲ್ಲಿ ತೊಡಗಿಸಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಜ.12 ರಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಪಿ.ಕೆ.ಲಾಹಿರಿ ತಿಳಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಸರ್ವಸದಸ್ಯರೂ ಬಂಗಾರದ ಬಾಂಡ್ ಯೋಜನೆಗೆ ಸಾಮೂಹಿಕವಾಗಿ ಒಪ್ಪಿಗೆ ನೀಡಿದರು ಎಂದು ಲಾಹಿರಿ ಹೇಳಿದರು.