ರಾಷ್ಟ್ರೀಯ

ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಮಾಡೀರಿ ಜೋಕೆ..!

Pinterest LinkedIn Tumblr

cigarateನವದೆಹಲಿ, ಜ.15-ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಮಾಡಿದರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ ಎಚ್ಚರ.  ಅಪ್ರಾಪ್ತರಿಗೆ ಸಿಗರೇಟ್ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಇನ್ನು ಮುಂದೆ ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ಮಕ್ಕಳ ರಕ್ಷಣೆ ಕುರಿತ 2015ರ ಕಾಯ್ದೆಯನ್ನು ಸಂಸತ್‌ನಲ್ಲಿ ಕಳೆದ ತಿಂಗಳು ಮಂಡಿಸಿ ಈ ಕುರಿತು ಇಂದು ಅಧಿಕೃತ ಸೂಚನೆ ಹೊರಡಿಸಲಾಗಿದೆ.

16 ರಿಂದ 18 ವರ್ಷದೊಳಗಿನವರಿಗೆ ಸಿಗರೇಟು, ತಂಬಾಕಿನಂತಹ ವಸ್ತುಗಳನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು, ಆ ರೀತಿ ಮಾರಾಟ ಮಾಡಿದವರಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ಧೂಮಪಾನದಿಂದ ಹಾಗೂ ಗುಟ್ಕಾ ದಂತಹ ತಂಬಾಕು ಸೇವನೆಯಿಂದ ಮಕ್ಕಳ ದೇಹಕ್ಕೆ ಹಾನಿಕಾರಕ ಅಂಶ ಸೇರ್ಪಡೆಯಾಗಲಿದೆ. ಆದ್ದರಿಂದ ಈ ರೀತಿ ಹಾನಿಕಾರಕವಾದ ವಸ್ತುಗಳನ್ನು ಮಾರಾಟ ಮಾಡುವುದು ಅಪರಾಧ. ಅಪ್ರಾಪ್ತರಿಗೆ ಇದನ್ನು ಮಾರಾಟ ಮಾಡದಿರುವುದು ಹಾಗೂ ಶಾಲೆಯ 100 ಮೀ. ಒಳಗೆ  ಮಾರಾಟ ನಿಷೇಧಿಸಲಾಗಿದೆ.

Write A Comment