ರಾಷ್ಟ್ರೀಯ

ಸಂತರು ಹಾಗೂ ಬಾಬಾಗಳ ಬಗ್ಗೆ ಅಪಹಾಸ್ಯ, ಟೀಕೆ ಬೇಡ: ಮಾರ್ಕಂಡೇಯ ಕಾಟ್ಜು

Pinterest LinkedIn Tumblr

mm-kriನವದೆಹಲಿ: ಯಾವುದೇ ಬಾಬಾರನ್ನು ಅನುಕರಣೆ ಮಾಡುವುದು ಅಥವಾ  ಟೀಕಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಹೇಳಿದ್ದಾರೆ.

ಕಾಮಿಡಿ ನೈಟ್ ನಟ ಕಿಕು ಶ್ರದ್ಧಾ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಯಾವುದೇ ದೇವ ಮಾನವ ಅಥವಾ ಬಾಬಾ ರನ್ನು ಅಪಹಾಸ್ಯ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಅವರು ಹೇಳಿದ್ದಾರೆ.

ಸ್ವಯಂ ಘೋಷಿತ ದೇವಮಾನವ ಬಾಬಾ ಹಾಗೂ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಕುರಿತು ವಿವಾದಾತ್ಮಕ ಮಿಮಿಕ್ರಿ ಮಾಡಿ ಬುಧವಾರ ಬಂಧನಕ್ಕೊಳಗಾಗಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಪ್ರಮುಖ ನಟ ಕಿಕು ಶಾರ್ದಾ ಅವರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಸಂತರನ್ನು, ದೇವ ಮಾನವರನ್ನು ಅಪಹಾಸ್ಯ ಮಾಡುವ ಪ್ರವೃತ್ತಿಯನ್ನು ಬಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Write A Comment