ರಾಷ್ಟ್ರೀಯ

ದೆಹಲಿ ಕೊಳಗೇರಿಯಲ್ಲಿ ಅಗ್ನಿ ಅವಘಡ: ಮೂವರು ಮಕ್ಕಳ ಸಾವು

Pinterest LinkedIn Tumblr

fire-10ನವದೆಹಲಿ: ದೆಹಲಿಯ ಉಸ್ಮನಾಪುರ್‌ ಕೊಳಗೇರಿ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮೂವರು ಮಕ್ಕಳು ಸಜೀವ ದಹನವಾಗಿದ್ದು, ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ.

ಮೃತಪಟ್ಟ ಮಕ್ಕಳನ್ನು ರೀನಾ(10), ಮೀನಾ(7) ಹಾಗೂ 6 ತಿಂಗಳ ಮಗು ಮುಬಾರಕ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿ ಆಕಸ್ಮಿಕದಿಂದಾಗಿ ಸುಮಾರು 25 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.

ಘಟನೆಗೆ ಇಲೆಕ್ಟ್ರಿಕ್ ಶಾರ್ಟ್ ಸರ್ಕಿಟ್​ಕಾರಣವಿರಬಹುದೆಂದು ಶಂಕಿಸಲಾಗಿದೆ. ಬೆಂಕಿ ನಂದಿಸಲು ಸುಮಾರು 1 ಗಂಟೆ ಕಾಲ ಅಗ್ನಿ ಶಾಮಕ ದಳ ಸಿಬ್ಬಂದಿ ಶ್ರಮಿಸಿತು ಎಂದು ಅಗ್ನಿಶಾಮಕ ದಳ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Write A Comment