ರಾಷ್ಟ್ರೀಯ

ಸೆಲ್ಫಿ ಬದಲಿಗೆ ‘ಕೌಫಿ’ : ಗೋವುಗಳ ರಕ್ಷಣೆಗೆ ಶುರುವಾಗಿದೆ ಹೊಸ ಟ್ರೆಂಡ್

Pinterest LinkedIn Tumblr

koupiಕೋಲ್ಕತಾ, ಡಿ.31-ಗೋವುಗಳ ಕುರಿತಾದ ಜನ ಜಾಗೃತಿ ಮೂಡಿಸಲು ಹೊಸದೊಂದು ಉಪಾಯ ಕಂಡು ಹಿಡಿದಿರುವ ಇಲ್ಲಿನ ಗೋಸೇವಾ ಪರಿವಾರ್, ಸೆಲ್ಫಿ ಬದಲಿಗೆ ಹಸುಗಳ ಜೊತೆ ಕೌಫಿ ತೆಗೆದುಕೊಳ್ಳುವ ಸ್ಪರ್ಧೆ ಏರ್ಪಡಿಸಿದೆ.

ಗೋಹತ್ಯೆ, ಗೋಮಾಂಸ ಸೇವನೆ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಹಸು ಜತೆ ಫೋಟೋ ತೆಗೆದುಕೊಂಡು ಅದನ್ನು ಕಳುಹಿಸಿಕೊಡುವಂತೆ ಪ್ರಕಟಿಸಿದೆ. ಈ ಕೌಫಿಗಳಲ್ಲಿ ಅತ್ಯುತ್ತಮವಾದುದಕ್ಕೆ ಬಹುಮಾನ ನೀಡುವ ಯೋಜನೆಯನ್ನು ಗೋಸೇವಾ ಪರಿವಾರ ಆಯೋಜಿಸಿದೆ. ಬಿಜೆಪಿ ಅಧಿಪತ್ಯದಿಂದ ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನಗಳಲ್ಲಿ ಗೋಮಾಂಸ ನಿಷೇಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಹಸುವನ್ನು ಮುದ್ದು ಮಾಡುತ್ತಿರುವ, ಅದರ ಪಾದಕ್ಕೆ ನಮಿಸುತ್ತಿರುವ, ಆಹಾರ ತಿನ್ನಿಸುತ್ತಿರುವ ಕೌಫಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು.

Write A Comment