ರಾಷ್ಟ್ರೀಯ

ಸ್ಮೃತಿ ಇರಾನಿ ಮೋದಿಯವರ ಎರಡನೇ ಪತ್ನಿ ಎಂದು ವಿವಾದಿತ ಹೇಳಿಕೆ ನೀಡಿದ ಮಾಜಿ ಸಚಿವ

Pinterest LinkedIn Tumblr

smruthi-irani

ಗುವಾಹಟಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರನ್ನು ಮೋದಿಯವರ ಎರಡನೇ ಪತ್ನಿ ಎಂದು ಹೇಳಿ ಹಿರಿಯ ಕಾಂಗ್ರೆಸ್ ನೇತಾರ ಮತ್ತು ಮಾಜಿ ಸಚಿವರೊಬ್ಬರು ವಿವಾದ ಸೃಷ್ಟಿಸಿದ್ದಾರೆ.

ಮಾಜಿ ರಾಜ್ಯ ಕೃಷಿ ಸಚಿವ ನಿಲಮೋನಿ ಸೆನ್ ದೆಕಾ ಅವರು ಭಾನುವಾರ ಈ ರೀತಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ವಿವಾದಿತ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸಚಿವರ ಹೇಳಿಕೆ ನಾಚಿಕೆಗೇಡು ಎಂದಿದ್ದಾರೆ. ಅದೇ ವೇಳೆ ದೆಕಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಿಜೆಪಿ ತೀರ್ಮಾನಿಸಿದೆ.

Write A Comment