ರಾಷ್ಟ್ರೀಯ

ಶೀಘ್ರ ಪಶ್ಚಿಮ ಘಟ್ಟ ಅಧಿಸೂಚನೆ

Pinterest LinkedIn Tumblr

westernGhats

ನವದೆಹಲಿ: ಮುಂದಿನ ವರ್ಷದ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‍ಎ) ಕುರಿತ ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಪರಿಸರ ಸೂಕ್ಷ್ಮ ಪ್ರದೇಶ ಕುರಿತ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳ ಪ್ರಸ್ತಾವನೆ, ಆಕ್ಷೇಪಗಳನ್ನು ಸ್ವೀಕರಿಸಿದ್ದು, ಅವುಗಳ ವಿಶ್ಲೇಷಣೆ ನಡೆದಿದೆ. ಇನ್ನು ಪ್ರತಿ ರಾಜ್ಯಗಳಿಗೆ ಮೂರರಿಂದ ನಾಲ್ಕು ದಿನ ಕಾಲಾವಕಾಶ ಕೊಟ್ಟು ಪ್ರಸ್ತುತ ಪ್ರಸ್ತಾವನೆಯ ಅಂಶಗಳ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಸಲಾಗುತ್ತದೆ.

ಇದೆಲ್ಲಾ ಮುಗಿಯುವ ಹೊತ್ತಿಗೆ ಜನವರಿ ಅಥವಾ ಫೆಬ್ರವರಿಯಾಗಬಹುದು. ಆ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಹೇಳಿದ್ದಾರೆ.

Write A Comment