
ನವದೆಹಲಿ: ಗೋವಿನಿಂದ ಒದಗುವ ಲಾಭಗಳಾದ ಹಾಲು, ಗಂಜಲ ಮತ್ತು ಸಗಣಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದಿರುವ ಶಿವಸೇನಾ ಸಂಸದ, ‘ಗೋ’ವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು ಎಂದು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ನೆನ್ನೆಯಷ್ಟೇ ಬಿಜೆಪಿ ಸದಸ್ಯರೊಬ್ಬರು ಭಗವದ್ಗೀತೆಯನ್ನು ‘ರಾಷ್ಟ್ರೀಯ ಪುಸ್ತಕ’ ಎಂದು ಘೋಷಿಸಲು ಆಗ್ರಹಿಸಿದ್ದರು.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಚಂದ್ರಕಾಂತ್ ಖೈರೆ ಅವರು ಹೀಗೆ ಆಗ್ರಹಿಸಿದ್ದಾರೆ. ನೆನ್ನೆಯಷ್ಟೇ ಬಿಜೆಪಿ ಸಂಸದ ಆದಿತ್ಯನಾಥ್ ಅವರು ವಿಶ್ವವೇ ‘ಜಿಹಾದಿ’ ಭಯೋತ್ಪಾದನೆಯಿಂದ ಬೆದರಿರುವಾಗ ಗೀತೆಯ ಸಂದೇಶ ಇಂದಿನ ದಿನಕ್ಕೆ ಬಹಳ ಉಚಿತವಾಗಿರುವುದರಿಂದ ಅದನ್ನು ‘ರಾಷ್ಟ್ರೀಯ ಪುಸ್ತಕ’ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದರು.