ರಾಷ್ಟ್ರೀಯ

ಟ್ವೀಟ್ ವಿವಾದ: ಕೇಜ್ರಿವಾಲ್ ಮಗಳನ್ನು ರೇಪ್ ಮಾಡಿದವರಿಗೆ ಬಹುಮಾನ!

Pinterest LinkedIn Tumblr

rape_protestದೆಹಲಿ:  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳನ್ನು ಅತ್ಯಾಚಾರಗೈದರೆ ಬಹುಮಾನ ನೀಡುತ್ತೇನೆ ಎಂದು ಗ್ಯಾರಿ ಸಿಂಗ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ಕೇಜ್ರಿವಾಲ್ ಮಗಳನ್ನು ಅತ್ಯಾಚಾರ ಮಾಡಿದರೆ ರು. 1 ಲಕ್ಷ ಹಾಗೂ ಬೈಕ್ ಬಹುಮಾನವಾಗಿ ಕೊಡುತ್ತೇನೆ ಎಂದು ಹೇಳಿರುವ ಗ್ಯಾರಿ, ಅತ್ಯಾಚಾರ ಮಾಡುವವನು 17 ಮತ್ತು 18ರ ಮಧ್ಯೆ ವಯಸ್ಸುಳ್ಳವನಾಗಿರಬೇಕೆಂದು ಟ್ವೀಟಿಸಿದ್ದಾನೆ.

ಈ ಟ್ವೀಟ್ ವಿವಾದವಾಗುತ್ತಿದ್ದಂತೆ ಟ್ವೀಟಿಸಿದಾತ ಅದನ್ನು ತೆಗೆದು ಹಾಕಿದ್ದಾನೆ. ಈತನ ಟ್ವೀಟ್‌ನ್ನು ನೋಡಿದ ನೆಟಿಜನ್‌ಗಳು ದೆಹಲಿ ಮಹಿಳಾ ಕಮಿಷನ್ ಸದಸ್ಯೆ ಪ್ರೊಮಿಲಾ ಗುಪ್ತಾ ಅವರ ಗಮನಕ್ಕೆ ತಂದಿದ್ದು, ತದನಂತರ ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಈ ಟ್ವೀಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರೊಮಿಲಾ ಟ್ವೀಟ್ ಮಾಡಿದ ಕೂಡಲೇ ವಿವಾದಿತ ಟ್ವೀಟ್ ಡಿಲೀಟ್ ಆಗಿದೆ.
ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಬಾಲಾಪರಾಧಿಯನ್ನು ಬಂಧಮುಕ್ತಗೊಳಿಸಿರುವ ವೇಳೆಯೇ ಈ ವಿವಾದ ಟ್ವೀಟ್ ಸುದ್ದಿಯಾಗಿದೆ.

Write A Comment