ರಾಷ್ಟ್ರೀಯ

ಅಧಿಕಾರಿಯ ಹೆಸರು ಹೇಳಿ: ಕೇಜ್ರಿಗೆ ಸಿಬಿಐ

Pinterest LinkedIn Tumblr

kejriwal-cbiನವದೆಹಲಿ: “ಯಾರು ತಾವು ಹೇಳಿದಂತೆ ಕೇಳುವುದಿಲ್ಲವೋ ಅವರ ವಿರುದ್ಧ ಅಸ್ತ್ರ ಪ್ರಯೋಗಿಸಿ ಎಂದು ಕೇಂದ್ರ ಸರ್ಕಾರ ಸಿಬಿಐಗೆ ಸೂಚಿಸಿದೆ ಎಂದು ಸ್ವತಃ ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ” ಎಂಬ  ದೆಹಲಿ  ಸಿಎಂ ಕೇಜ್ರಿವಾಲ್ ಹೇಳಿಕೆಗೆ ಸಿಬಿಐ ಕೆಂಡಾಮಂಡಲವಾಗಿದೆ. ಆ ಅಧಿಕಾರಿಯ ಹೆಸರು ಹೇಳಿ ಎಂದು ಶನಿವಾರ ಕೇಜ್ರಿಗೆ ಸಿಬಿಐ ಸವಾಲೆಸೆದಿದೆ.

ದೆಹಲಿ ಸಿಎಂ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಸಿಬಿಐ ವಕ್ತಾರ ದೇವ್‍ಪ್ರೀತ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ, “ಟ್ವೆಂಟಿ ಫಸ್ಟ್ ಸೆಂಚುರಿ ಸಂಸ್ಥೆಯ ಲೋಕೇಶ್ ಶರ್ಮಾ ಮೂಲಕ ಜೇಟ್ಲಿ ಅವರು   ನಮಗೆ ನೋಟಿಸ್ ಕಳುಹಿಸಿದ್ದಾರೆ. ಆದರೆ, ನಾವು ಸಾವಿರ ನೋಟಿಸ್ ಬಂದರೂ ಪ್ರಶ್ನೆ ಹಾಕುವುದನ್ನು ನಿಲ್ಲಿಸಲ್ಲ” ಎಂದು ಆಪ್ ಹೇಳಿದೆ.

Write A Comment