ಅಂತರಾಷ್ಟ್ರೀಯ

ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿದ್ದ ಭಾರತೀಯ ಮೂಲದ ಮಹಿಳೆಗೆ ಜೈಲು ಶಿಕ್ಷೆ

Pinterest LinkedIn Tumblr

Jail

ವಾಷಿಂಗ್ಟನ್ : ತನ್ನದೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿ ಗಂಭೀರವಾಗಿ ಗಾಯಗೊಳಿಸಿ ಮಗುವಿನ ಪಕ್ಕೆಲಬುಗಳು ಮತ್ತು ಕಾಲಿನ ಮೂಳೆಗಳನ್ನು ಮುರಿದಿದ್ದ ಭಾರತೀಯ ಮೂಲದ ತಾಯಿಯೊಬ್ಬಳಿಗೆ ಅಮೆರಿಕಾ ನ್ಯಾಯಾಲಯ ಕಾರಾಗೃಹ ಶಿಕ್ಷೆ ವಿಧಿಸಿದೆ.

25 ವರ್ಷದ ರಿಂಕೂ ಬೆನ್ ಪಟೇಲ್ ಎಂಬ ಮಹಿಳೆ ತನ್ನ 5 ವಾರಗಳ ಹೆಣ್ಣು ಶಿಶುವಿಗೆ ಇಂಥಾ ಭಯಾನಕ ಚಿತ್ರಹಿಂಸೆ ನೀಡಿದ್ದು, ಈಗ ಉತ್ತರ ಕರೋಲಿನಾದ ಹಂಬರ್‌ಲೆಂಡ್ ಕೌಂಟಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ.

ಹಲ್ಲೆಯಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಗು ಈಗ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಗುವನ್ನು ಈಗ ಸಾಮಾಜಿಕ ಸೇವಾ ಕೇಂದ್ರವೊಂದರಲ್ಲಿ ಇರಿಸಿಕೊಂಡು ಆರೈಕೆ ಮಾಡಲಾಗುತ್ತಿದೆ.

ನವೆಂಬರ್ 27 ರಂದು ಆಂಬುಲೆನ್ಸ್‌ಗೆ ಕರೆ ನೀಡಿದ್ದ ರಿಂಕು ಬೆನ್ ಪಟೇಲ್ ತನ್ನ ಮಗುವಿಗೆ ಬಿದ್ದು ಗಾಯಗಳಾಗಿವೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ, ಮಗುವಿನ ಪಕ್ಕೆಲಬುಗಳು, ಕಾಲಿನ ಮೂಳೆಗಳು ಮುರಿದಿದ್ದು ತಲೆಯಲ್ಲಿ ರಕ್ತಸ್ರಾವವಾಗಿತ್ತು. ಇದನ್ನು ಕಂಡ ವೈದ್ಯರು ಇದು ಹಲ್ಲೆ ಪ್ರಕರಣ ಎಂದು ದೂರು ನೀಡಿದ್ದರು.

Write A Comment