ರಾಷ್ಟ್ರೀಯ

ಹತ್ಯೆಗೊಳಗಾದ ಉಗ್ರನಿಂದ ಜಮಾತ್ ಉದ್ ದವಾ ಟೀಶರ್ಟ್, ಪಾಕ್ ನಿರ್ಮಿತ ಆಯುಧ ಪತ್ತೆ

Pinterest LinkedIn Tumblr

jud-t-shirtsಪೂಂಚ್:  ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ಸೈನಿಕರ ಗುಂಡೇಟಿಗೆ ಬಲಿಯಾದ ಉಗ್ರನಿಂದ  ಜಮಾತ್ ಉದ್ ದವಾ ಎಂದು ಉರ್ದುವಿನಲ್ಲಿ ಬರೆದ ಟೀ ಶರ್ಟ್ ಪತ್ತೆಯಾಗಿದೆ. ಅಷ್ಟೇ ಅಲ್ಲ, ಮೇಡ್ ಇನ್ ಪಾಕಿಸ್ತಾನ್ ಎಂದು ಬರೆದಿರುವ ಆಹಾರ ಪೊಟ್ಟಣ ಮತ್ತು ಆಯುಧಗಳೂ ಪತ್ತೆಯಾಗಿದೆ.

ಪೂಂಚ್‌ನ  ಸಬ್‌ಜಿಯಾನ್ ಪ್ರದೇಶದಲ್ಲಿ ಉಗ್ರನ ಎನ್‌ಕೌಂಟರ್ ನಡೆದಿತ್ತು.

26/11 ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಜಮಾತ್ ಉದ್ ದವಾ  ಸಂಘಟನೆಯವನೇ ಆಗಿದ್ದನು. ಈ ಸಂಘಟನೆಯನ್ನು ವಿಶ್ವಸಂಸ್ಥೆ ಉಗ್ರ ಸಂಘಟನೆಯೆಂದು ಘೋಷಿಸಿತ್ತು.

ಅದೇ ವೇಳೆ ಸಿಎನ್‌ಎನ್ ಐಬಿಎನ್ -ಐಬಿಎನ್ ವರದಿ ಪ್ರಕಾರ  ಜಮ್ಮು ಕಾಶ್ಮೀರದ ಮೂಲಕ ನುಸುಳಿ ಭಾರತದಲ್ಲಿ ಉಗ್ರ ಕೃತ್ಯಗಳನ್ನು ಮಾಡಲು ಜಮಾತ್ ಉದ್ ದವಾದ ಮುಖ್ಯಸ್ಥ  ಹಫೀಜ್ ಸಯೀದ್ ಯೋಜನೆ ಮಾಡಿದ್ದಾರೆ ಎಂಬ ಮಾಹಿತಿ ಭಾರತೀಯ ರಕ್ಷಣಾ ದಳಕ್ಕೆ ಸಿಕ್ಕಿದೆ.

ಇಷ್ಟೆಲ್ಲಾ  ಸಾಕ್ಷ್ಯಗಳು ಸಿಕ್ಕಿದ್ದರೂ, ಈ ಬಗ್ಗೆ ಪಾಕ್ ಏನೆನ್ನುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

Write A Comment