
ವಾಷಿಂಗ್ಟನ್: ಸಾಮಾಜಿಕ ತಾಣವೇ ಹೀರೋ ಆದ ವರ್ಷವಾಗಿತ್ತು 2015. ಜಗತ್ತಿನ ನಗು, ಸಂತೋಷ, ಸುಖ, ದುಃಖಗಳನ್ನು ವ್ಯಕ್ತಪಡಿಸಲು ಫೇಸ್‌ಬುಕ್ ವೇದಿಕೆಯಾಗಿತ್ತು. ಇನ್ನೇನು 2015 ಮುಗಿಯುತ್ತಾ ಬರುತ್ತಿದ್ದಂತೆ ಈ ವರ್ಷದ ಹಿನ್ನೋಟದ ವಿಡಿಯೋವನ್ನು ಫೇಸ್‌ಬುಕ್ ಪ್ರಕಟಿಸಿದೆ.
ವಿಯೆಟ್ನಾಂನಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಿ ಎಂದು ಒತ್ತಾಯಿಸಿ ನಡೆದ ಸೈಕಲ್ ರ್ಯಾಲಿಯ ದೃಶ್ಯದ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಗಡಿಯಾರ ವಿಷಯದಲ್ಲಿ ಬಂಧಿತನಾದ ಅಹಮ್ಮದ್, ಪ್ಲುಟೋದ ಚಿತ್ರಗಳು, ನಾಸಾದ ಸಾಧನೆ, ಬ್ಲಡ್ ಮೂನ್, ವಲಸೆಗಾರರು, ಅಭಯಾರ್ಥಿಗಳು, ಪ್ಯಾರಿಸ್ ದುರಂತ, ಕ್ರೀಡಾ ವಿಶೇಷಗಳು, ಮೋದಿಯವರ ಭಾಷಣ ಸೇರಿದಂತೆ ಬಾಹುಬಲಿ ಚಿತ್ರದ ಹಾಡಿನ ದೃಶ್ಯವೂ ಈ ವೀಡಿಯೋದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
2.02 ನಿಮಿಷ ಅವಧಿಯ ಈ ವೀಡಿಯೋ ಈಗಾಗಲೇ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. Let’s stand together in 2016 ಎಂಬ ಸಂದೇಶದೊಂದಿಗೆ ವೀಡಿಯೋ ಸಮಾಪ್ತಿಗೊಳ್ಳುತ್ತದೆ.