ರಾಷ್ಟ್ರೀಯ

ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಅಸಹಾಯಕ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿದ್ದ ಕುಡಕನ ಬಂಧನ

Pinterest LinkedIn Tumblr

shoಚಂಡೀಗಢ, ಡಿ. 11- ವೃದ್ಧ ದಂಪತಿ ಮೇಲೆ ಹಲ್ಲೆ  ಮಾಡಿದ್ದ  ಕುಡಕ ವ್ಯಕ್ತಿಯೊಬ್ಬನನ್ನು  ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:  ನಿನ್ನೆ ಚಂಡಿಗಢದ ಮಾರ್ಕೆಟ್  ಕಾಂಪ್ಲೆಕ್‌್ತನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ವೃದ್ಧ ದಂಪತಿ ಬಂದಿದ್ದರು. ತಾವು ಖರೀದಿಸಿದ  ಮೊಬೈಲ್ ಬಗ್ಗೆ ವಿಚಾರಿಸುತ್ತಿದ್ದ ವೇಳೆ ಅಚಾನಕ್ಕಾಗಿ ಬಂದ ವ್ಯಕ್ತಿಯೊಬ್ಬ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಜಗಳವು ತಾರಕ್ಕೇರಿದ್ದು ಆ ವ್ಯಕ್ತಿಯು ವೃದ್ಧ ಮಹಿಳೆಯ ದವಡೆಗೆ ಗಾಯ ಮಾಡಿದ್ದಲ್ಲದೆ , ವೃದ್ಧನ ಮೇಲೆ ತೀವ್ರತರ ಹಲ್ಲೆ ಮಾಡಿದ್ದಾನೆ.  ಈ ಘಟನೆ ನಡೆಯುವ ವೇಳೆ ಮೊಬೈಲ್ ಅಂಗಡಿ ಹಾಗೂ ಸುತ್ತಮುತ್ತಲಿನಲ್ಲಿದ್ದ ಜನರು ನೆರವಿಗೆ ಬಂದು ಪೊಲೀಸರಿಗೆ ಸುದ್ದಿ  ಮುಟ್ಟಿಸಿದ್ದಾರೆ.

ತಕ್ಷಣ ಸ್ಥಳಕ್ಕೆ  ಆಗಮಿಸಿದ ಚಂಡೀಗಢದ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುವಾಗ ಗುಂಡಿನ ಗಮತ್ತಿನಲ್ಲಿ ಹಲ್ಲೆ  ನಡೆಸಿದ್ದಾನೆ ಎಂದು ತಿಳಿದು ಬಂದಿದೆ.  ಈ ಎಲ್ಲಾ ದೃಶ್ಯಗಳು ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿಯ ಫೂಟೇಜ್‌ನಲ್ಲಿ ಸೆರೆಯಾಗಿದ್ದು ಪೊಲೀಸರು  ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Write A Comment