ರಾಷ್ಟ್ರೀಯ

ಅಪಘಾತ ಮಾಡಿ ಪೊಲೀಸರೊಂದಿಗೆ ದುರ್ವತನೆ ತೋರಿದ ರಷ್ಯಾ ರಾಯಭಾರಿ

Pinterest LinkedIn Tumblr

delhi-police

ರಷ್ಯಾ: ರಷ್ಯಾ ರಾಯಭಾರಿಯೊಬ್ಬರು ಅಪಘಾತ ಮಾಡಿ ನಂತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಯೊಂದು ದಕ್ಷಿಣ ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ರಷ್ಯಾ ರಾಯಭಾರಿಯಿದ್ದ ಕಾರು ನಿನ್ನೆ ರಾತ್ರಿ ವೇಗವಾಗಿ ಬಂದು ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದೆ. ನಂತರ ಪೊಲೀಸರ ಬ್ಯಾರಿಕೇಡ್ ಗೂ ಗುದ್ದಿದೆ. ಸ್ಥಳದಲ್ಲಿ ಪೊಲೀಸರು ರಾಯಭಾರಿಯನ್ನು ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿ ಮಾತನಾಡಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ್ದು, ಬೆದರಿಕೆ ಹಾಕಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ರಷ್ಯಾ ರಾಯಭಾರಿಯಾಗಿರುವುದರಿಂದ ಅವರಿಗೆ ಈ ಬಗ್ಗೆ ವಿನಾಯಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Write A Comment