ರಾಷ್ಟ್ರೀಯ

ಚೆನ್ನೈಯಲ್ಲಿ ಪ್ರವಾಹದ ಮಧ್ಯೆ ಕೊನೆಗೂ ಸೂಸುತ್ರವಾಗಿ ನಡೆಯಿತೊಂದು ಮದುವೆ

Pinterest LinkedIn Tumblr

chennai-flood-wedding

ಚೆನ್ನೈ: ವಿದ್ಯುತ್ ಸಂಪರ್ಕ ಇಲ್ಲ, ಮೊಬೈಲ್ ಸಂಪರ್ಕ ಇಲ್ಲವೇ ಇಲ್ಲ, ಒಂದು ಕಡೆ ಆಹಾರಕ್ಕೆ ಜನ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಸಂಗ್ರಹಿಸಿದ ಆಹಾರವನ್ನು ಸಂತ್ರಸ್ತರಿಗೆ ತಲುಪಿಸುವುದು ಹೇಗೆ ಎನ್ನುವ ಯೋಚನೆ ಸೈನಿಕರದ್ದು. ಆದರೆ ಈ ಸಮಸ್ಯೆಗಳಿದ್ದರೂ ಚೆನ್ನೈ ಮಹಾ ನಗರದಲ್ಲಿ ಪೂರ್ವ ನಿಗದಿಯಾಗಿದ್ದ ಒಂದು ಮದುವೆ ಮಾತ್ರ ಕೊನೆ ಕ್ಷಣದಲ್ಲಿ ಸೂಸುತ್ರವಾಗಿ ನಡೆದಿದೆ.

ಪೂರ್ಣಿಮಾ ಮತ್ತು ರಾಜ ಗೋಪಾಲ್ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು ಭಾನುವಾರ ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ ಮಳೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ವಧು ಮತ್ತು ವರನ ಕಡೆಯವರು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ಆದರೆ ಏನು ಮಾಡುವುದು ಮದುವೆಯನ್ನು ಮಾತ್ರ ನಿಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಇಬ್ಬರು ವಿದೇಶದಲ್ಲಿರುವುದರಿಂದ ಒಂದು ವರ್ಷದಿಂದಲೇ ತಯಾರಿ ಜೋರಾಗಿ ನಡೆದಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಸಂಬಂಧಿಕರು ಸಹ ಬರತೊಡಗಿದರು.

ಆದರೆ ಪೂರ್ಣಿಮಾ ತಂದೆ ತಾಯಿಗಳಿಗೆ ವರನ ಕಡೆಯವರು ಹೇಗೆ ಬರುತ್ತಾರೆ ಎನ್ನುವುದೇ ದೊಡ್ಡ ಚಿಂತೆಯಾಗಿತ್ತು. ಆದರೆ ವರನ ಕಡೆಯವರು ಮಾತ್ರ ಮದುವೆ ಬರುತ್ತೇವೆ ಎಂದು ಮಾತು ಕೊಟ್ಟಂತೆ ನಿನ್ನೆ ಕಲ್ಯಾಣ ಮಂಟಪಕ್ಕೆ ಬಂದಿದ್ದು ಮದುವೆ ನಿಗದಿ ಪಡಿಸಿದ ಮುಹೂರ್ತದಲ್ಲಿ ನಡೆದಿದೆ.

ವಿಶೇಷ ಏನೆಂದರೆ ಚೆನ್ನೈ ಮಳೆಯಲ್ಲಿ ವರನ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ವಲಚೆರಿ ಪ್ರದೇಶದಲ್ಲಿ ಇವರು ತಂಗಿದ್ದರು. ಮದುವೆಯ ದಿನದಂದು ಅಲ್ಲಿಂದಲೇ ಕಲ್ಯಾಣ ಮಂಟಪಕ್ಕೆ ದೋಣಿಯಲ್ಲಿ ಆಗಮಿಸಿದ್ದರು. ಒಟ್ಟಿನಲ್ಲಿ ಮೊಬೈಲ್ ಸಂಪರ್ಕವಿಲ್ಲದೇ ನಿಗದಿಯಾಗಿದ್ದ ಅಮೆರಿಕ ಜೋಡಿಯ ಮದುವೆ ಯಶಸ್ವಿಯಾಗಿ ನಡೆಯಿತು.

Write A Comment