ರಾಷ್ಟ್ರೀಯ

ಚೆನ್ನೈ ಪ್ರವಾಹ: ಹಸುಗೂಸಿಗೆ ರಕ್ಷಕ ‘ಯೂನಸ್’ ಹೆಸರಿಟ್ಟು ಕೃತಜ್ಞತೆ ತೋರಿದ ಹಿಂದೂ ದಂಪತಿ

Pinterest LinkedIn Tumblr

Coupl

ಚೆನ್ನೈ: ಚೆನ್ನೈ ಪ್ರವಾಹದಲ್ಲಿ ಮುಳುಗಿ ಹೋಗುತ್ತಿದ್ದ ಚಿತ್ರ ಮತ್ತು ಮೋಹನ್ ದಂಪತಿಗೆ ಬಂದೊದಗಿದ್ದು ಮಹಮದ್ ಯೂನಸ್. ನೆನ್ನೆ ಜನಿಸಿದ ಅವರ ಹೆಣ್ಣು ಮಗುವಿಗೆ ‘ಯೂನಸ್’ ಎಂದು ಹೆಸರಿಸುವ ಮೂಲಕ ಗೌರವ,ಕೃತಜ್ಞತೆ ತೋರಿದ್ದಾರೆ.

ಉರಪಕ್ಕಂ ನಲ್ಲಿ ವಾಸಿಸುತ್ತಿದ್ದ ಚಿತ್ರ ಅವರು ಗರ್ಭಿಣಿ. ಮಗುವಿಗೆ ಜನ್ಮ ನೀಡಲು ಕೆಲವೇ ದಿನಗಳು ಉಳಿದಿದ್ದವು. ಆದರೆ ಮಾನ್ಸೂನ್ ನಿಂದ ಹೊಡೆದ ಭಾರಿ ಮಳೆಗೆ ತಮ್ಮ ಮನೆಯೂ ಸಿಕ್ಕಿಹಾಕಿಕೊಂಡು ಕುತ್ತಿಗೆಯವರೆಗೆ ನೀರು ಹರಿದಿತ್ತಂತೆ. ಈ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ವಿಷಯವನ್ನು ಮೆಸೆಜಿಂಗ್ ಆಪ್ ಮೂಲಕ ತಿಳಿದ ಮೊಹಮ್ಮದ್ ಯೂನಸ್ ತನ್ನ ಗೆಳೆಯರೊಂದಿಗೆ ಇವರನ್ನು ರಕ್ಷಿಸಲು ಮುಂದಾಗಿದ್ದಾರೆ.

ದೋಣಿಗಳನ್ನು ಹುಡುಕಿ ಪ್ರವಾಹದಲ್ಲಿ ಸಿಕ್ಕಿದ್ದ ಇವರನ್ನು ತಲುಪಲು ನಾಲ್ಕು ಘಂಟೆಗಳ ಕಾಲ ಹಿಡಿಯಿತು ಎಂದು ತಿಳಿಸುತ್ತಾರೆ ಯೂನಸ್. “ಎಲ್ಲಿಯೂ ವಿದ್ಯುಚ್ಚಕ್ತಿ ಇರಲಿಲ್ಲ. ಜನರು ಮರಗಳನ್ನು ಹತ್ತಿ ಕಟ್ಟಡಗಳ ಮೇಲಿಂದ ಸಹಾಯಕ್ಕೆ ಮೊರೆ ಇಡುತ್ತಿದ್ದರು. ಎರಡು ಕುಟುಂಬಗಳು ಕುತ್ತಿಗೆಯವರೆಗೆ ಹರಿಯುತಿದ್ದ ನೀರಿನಲ್ಲಿ ಸಿಲುಕಿದ್ದರು. ಅವರನ್ನು ದೋಣಿಯಲ್ಲಿ ಕೂರಿಸಿಕೊಂಡ ಮೇಲೆಯೇ ತಿಳಿದದ್ದು ಅವರಲ್ಲಿ ಒಬ್ಬರು ಗರ್ಭಿಣಿ ಎಂದು. ಅವರು ಮಗುವಿಗೆ ಜನ್ಮ ನೀಡಲು ಎರಡು ದಿನಗಳಷ್ಟೇ ಬಾಕಿ ಉಳಿದಿತ್ತು” ಎಂದು ವಿವರಿಸುತ್ತಾರೆ ಯೂನಸ್.

ಮುಖ್ಯರಸ್ತೆಗೆ ದೋಣಿ ಬರಲು ೧೫ ನಿಮಿಷ ಹಿಡಿಯಿತಂತೆ. ಅಷ್ಟರಲ್ಲಿ ಚಿತ್ರಾ ಭಯಕ್ಕೆ ಎಚ್ಚರ ತಪ್ಪಿರುವುದನ್ನು ಯೂನಸ್ ಗಮನಿಸಿದ್ದಾರೆ. ಅವರನ್ನು ಎಚ್ಚರಿಸಲು, ಸಮಾಧಾನ ಪಡಿಸಲು ಯೂನಸ್ ಕಥೆ ಹೇಳಿದ್ದಾರೆ. “ದೋಣಿ ಮುಗುಚಿ ಬಿದ್ದಿದ್ದ ಮರವೊಂದಕ್ಕೆ ಢಿಕ್ಕಿ ಹೊಡೆದು ಮುಳುಗುವ ಅಪಾಯದಲ್ಲಿತ್ತು. ಆ ಭಯಕ್ಕೆ ಅವರು ಎಚ್ಚರ ತಪ್ಪಿದರು. ಮತ್ತೊಬ್ಬರಿಗೆ ಸಹಾಯ ಮಾಡದ ಹೊರತು ಹಣ ಕಾಗದದ ಚೂರು ಎಂದು ತಿಳಿಸುವ ಒಂದು ಕಥೆ ಹೇಳಿದೆ ಅವರಿಗೆ” ಎಂದು ಯೂನಸ್ ನೆನಪಿಸಿಕೊಳ್ಳುತ್ತಾರೆ.

Write A Comment