ರಾಷ್ಟ್ರೀಯ

ಗಂಗಾ ನದಿಯ ತೀರದುದ್ದಕ್ಕೂ 30 ಬಂದರುಗಳ ಸ್ಥಾಪನೆ

Pinterest LinkedIn Tumblr

ganga

ನವದೆಹಲಿ, ಡಿ.6: ಗಂಗಾನದಿಯ ತೀರದಲ್ಲಿ 30ಕ್ಕೂ ಹೆಚ್ಚು ಬಂದರುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಭೂಸಾರಿಗೆ ಹಾಗೂ ಬಂದರು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಜಲಮಾರ್ಗವಾಗಿ ಸರಕು ಸಾಗಣೆಯಿಂದ ತೈಲ ಉಳಿತಾಯದ ಜೊತೆಗೆ ಪರಿಸರ ಸಂರಕ್ಷಣೆಯೂ ಆಗುತ್ತದೆ. ಇದರಿಂದ ವ್ಯಾಪಾರ-ವಹಿವಾಟು ವೃದ್ಧಿಯಾಗಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿವೆ ಎಂದು ಅವರು ತಿಳಿಸಿದರು. ರಸ್ತೆ ಮಾರ್ಗವಾಗಿ ಸರಕುಗಳನ್ನು ಸಾಗಿಸುವಾಗ ತಗಲುವ ವೆಚ್ಚಕ್ಕಿಂತ ಜಲಮಾರ್ಗ ಮೂಲಕ ಸಾಗಿಸಿದರೆ ಶೇ.40 ರಷ್ಟು ಉಳಿತಾಯವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದಷ್ಟು ಬೇಗ ಈ ಯೋಜನೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

Write A Comment