ರಾಷ್ಟ್ರೀಯ

ನೇಪಾಳದ ಭೂಕಂಪದ ವೇಳೆ ಬದುಕುಳಿದ ಯುವಕ ಚೆನ್ನೈ ಪ್ರವಾಹಕ್ಕೆ ಸಿಕ್ಕಿದ ! ಇದೀಗ ಆತನನ್ನು ಮತ್ತೊಮ್ಮ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ

Pinterest LinkedIn Tumblr

chen

ಚೆನ್ನೈ: ಕೆಲವು ತಿಂಗಳ ಹಿಂದೆ ನೇಪಾಳದ ಭೀಕರ ಭೂಕಂಪದಲ್ಲಿ ಬದುಕಿಳಿದಿದ್ದ ವ್ಯಕ್ತಿಯೊಬ್ಬ ಚೆನ್ನೈ ನ ಜಲಪ್ರಳಯಕ್ಕೆ ಸಿಲುಕಿ ಮತ್ತೊಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತಮಿಳುನಾಡಿನ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ನೇಪಾಳ ಮೂಲದ 18 ವರ್ಷದ ಯುವಕ ಅಭಿಕ್ ಥಾಪ, ಚೆನ್ನೈ ನ ಭೀಕರ ಜಲಪ್ರಯಳದಿಂದ ಪಾರಾಗಿರುವ ಯುವಕ. ಎಸ್.ಆರ್.ಎಂ ವಿಶ್ವವಿದ್ಯಾನಿಲಯದಲ್ಲಿ ಜೆನೆಟಿಕ್ಸ್ ವಿದ್ಯಾರ್ಥಿಯಾಗಿರುವ ಥಾಪ, ಜಲಪ್ರಳಯದಲ್ಲಿ ಸಿಲುಕಿಕೊಂಡಿದ್ದ.

ಥಾಪ ಹಾಗೂ ಆತನ ಇತರ ಸಹಪಾಠಿಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡ ಜಲಪ್ರವಾಹದಿಂದ ರಕ್ಷಿಸಿ ಜಲಾವೃಉತಗೊಂಡ ಚೆನ್ನೈ ನಿಂದ 30 ಕಿ.ಮಿ ದೂರದಲ್ಲಿರುವ ತಾಂಬರಂ ವಾಯು ನೆಲೆಗೆ ತಲುಪಿಸಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಈ ಹಿಂದೆ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ನಾನು ಮತ್ತು ನನ್ನ ಕುಟುಂಬದವರು ಸಿಕುಕಿಕೊಂಡಿದ್ದೆವು, ರಕ್ಷಣಾ ತಂಡದ ಸಹಾಯದಿಂದ ಅಪಾಯದಿಂದ ಪಾರದೆವು ಎಂದು ಹೇಳಿದ್ದಾರೆ.

ಕೆಲವೇ ತಿಂಗಳ ಅಂತರದಲ್ಲಿ ಎರಡು ಬಾರಿ ತೀವ್ರತರ ನೈಸರ್ಗಿಕ ವಿಪತ್ತಿಗೆ ಸಿಲುಕಿದರೂ ಪಾರಾಗಿರುವ ಅಭಿಕ್ ಥಾಪ, ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಚೆನ್ನೈ ನ ಜಲಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Write A Comment