ರಾಷ್ಟ್ರೀಯ

ಪಾಕಿಸ್ತಾನ ಬೇಹುಗಾರಿಕೆ ತನಿಖೆ; ದೆಹಲಿ ಪೋಲಿಸರಿಂದ ಮತ್ತೊಬ್ಬನ ಬಂಧನ

Pinterest LinkedIn Tumblr

arrested

ನವದೆಹಲಿ: ಪಾಕಿಸ್ತಾನಿ ಮೂಲದ ಐ ಎಸ್ ಐ ನಡೆಸುತ್ತಿರುವ ಬೇಹುಗಾರಿಕೆಯ ಸಂಬಂಧ ನಡೆಯುತ್ತಿರುವ ತನಿಖೆಯ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದು ಈಗ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಬಂಧಿತನಾದವನನ್ನು ಸಬರ್ ಎಂದು ಗುರುತಿಸಲಾಗಿದ್ದು, ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದಕ್ಕೂ ಮುಂಚೆ ದೆಹಲಿ ಪೊಲೀಸರು ಗಡಿ ಭದ್ರತಾ ಪಡೆಯ (ಬಿ ಎಸ್ ಎಫ್) ಮುಖ್ಯ ಕಾಂಸ್ಟೆಬರ್ ಅಬ್ದುಲ್ ರಶೀದ್, ೪೪ ವರ್ಷದ ಗ್ರಂಥಾಲಯ ಸಹಾಯಕ ಕಫಿತುಲ್ಲಾ ಖಾನ್ ಅಲಿಯಾಸ್ ಮಾಸ್ಟರ್ ರಾಜ ಇವರುಗಳನ್ನು ಭಾರತದ ಭದ್ರತೆಗೆ ಸಂಬಧಿಸಿದಂತೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ ಎಸ್ ಐ ಗೆ ಒದಗಿಸಿದ ಆರೋಪದಲ್ಲಿ ಜಮ್ಮು ಕಾಶ್ಮೀರದಿಂದಲೇ ಬಂಧಿಸಿದ್ದರು.

ಅಲ್ಲದೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಿಂದ ಭಾರತೀಯ ಸೇನೆಯ ಮಾಜಿ ಹವಾಲ್ದಾರ್ ಮುನ್ನಾವರ್ ಅಹ್ಮದ್ ಮೀರ್ ನನ್ನು ಕೂಡ ಶುಕ್ರವಾರ ಪೊಲೀಸರು ಬಂಧಿಸಿದ್ದರು. ಪೊಲೀಸರ ಪ್ರಕಾರ ಖಾನ್ ಮತ್ತು ಮೀರ್ ಸಂಪರ್ಕಕ್ಕೆ ಸಬರ್ ಸಹಾಯ ಮಾಡಿದ್ದ ಎನ್ನಲಾಗಿದೆ. ಈ ಎಲ್ಲಾ ಆಪಾದಿತರನ್ನು ದೆಹಲಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Write A Comment