ರಾಷ್ಟ್ರೀಯ

ಜನಲೋಕಪಾಲ್ ಮಸೂದೆ: ಅಣ್ಣಾ ಹಜಾರೆಯನ್ನು ಭೇಟಿ ಮಾಡಿದ ಪ್ರಶಾಂತ್ ಭೂಷಣ್

Pinterest LinkedIn Tumblr

prasanthನವದೆಹಲಿ: ದೆಹಲಿ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಮಂಡಿಸಿದ ಜನಲೋಕಪಾಲ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಆಪ್ ನಾಯಕ ಪ್ರಶಾಂತ್ ಭೂಷಣ್, ಇಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವರಾಜ್ ಅಭಿಯಾನದ ಮುಖಂಡರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್, ಜನಲೋಕಪಾಲ ಮಸೂದೆಯನ್ನು ವಿರೋಧಿಸಲು ಅಣ್ಣಾ ಹಜಾರೆಯವರ ಮನವೊಲಿಸಲು ಮುಂದಾಗಿ ತಮ್ಮ ಪರ ಸೆಳೆಯುವ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ದೆಹಲಿ ವಿಧಾನಸಭೆಯಲ್ಲಿ ಮಂಡಿಸಿದ ಜನಲೋಕಪಾಲ ಮಸೂದೆಗೆ ಹಜಾರೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ಜನಲೋಕಪಾಲ್ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಪ್ರಶಾಂತ್ ಭೂಷಣ್, ಇಂದು ಬೆಳಿಗ್ಗೆ ರಾಲೇಗಣ್ ಸಿದ್ದಿಯಲ್ಲಿರುವ ಹಜಾರೆಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಪ್ರಸ್ತುತ ಮಂಡಿಸಿರುವ  ಲೋಕಪಾಲ್ ಮಸೂದೆ ಪರಿಷ್ಕ್ರತವಾಗಿದ್ದು, ನೇಮಕಾತಿ, ವಜಾ ಸೇರಿದಂತೆ ಕೇಂದ್ರ ಸರಕಾರದೊಂದಿಗೆ ಸಂಘರ್ಷ ಸಾರುವ ಅಂಶಗಳಿವೆ ಎಂದು ಪ್ರಶಾಂತ್ ಭೂಷಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Write A Comment