ಅಂತರಾಷ್ಟ್ರೀಯ

ಸ್ಯಾನ್ ಫ್ರಾನ್ಸಿಸ್ಕೊ ತಲುಪಿದ ಮೊದಲ ಏರ್ ಇಂಡಿಯಾ ವಿಮಾನ

Pinterest LinkedIn Tumblr

air india

ಸ್ಯಾನ್‌ಫ್ರಾನ್ಸಿಸ್ಕೊ, ಡಿ.3- ನವದೆಹಲಿ ಸ್ಯಾನ್‌ಫ್ರಾನ್ಸಿಸ್ಕೊ ನಾನ್‌ಸ್ಟಾಪ್ ಏರ್ ಇಂಡಿಯಾ ಸಂಸ್ತೆಯ ಪ್ರಪ್ರಥಮ ವಿಮಾನ ಇಂದು ಬೆಳಗ್ಗೆ 5.40ಕ್ಕೆ ಇಲ್ಲಿಗೆ ಬಂದಿಳಿದಾಗ ನೂರಾರು ಜನ ವಿಮಾನವನ್ನು ಸ್ವಾಗತಿಸಿದರು. ವಿಮಾನ ನಿಲ್ದಾಣದ ಸ್ತಂಭದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.  ನವದೆಹಲಿಯಿಂದ ಹೊರಟಿದ್ದ ತಡೆ ತಹಿತ ಏರ್ ಇಂಡಿಯಾ 173, ಬಿ777-2000 ಎಲ್‌ಆರ್ ವಿಮಾನ 230 ಪ್ರಯಾಣಿಕರೊಂದಿಗೆ ಲ್ಯಾಂಡ್ ಆದಾಗ ಅಲ್ಲಿ ನೆರೆದಿದ ಜನ ಹರ್ಷೋದ್ಗಾರ ಮಾಡಿ ಕುಣಿದು ಕುಪ್ಪಳಿಸಿದರು.

ಭಾರತದ ಕಾನ್ಸೆಲ್ ಜನರಲ್ ವೆಂಕಟೇಶ್ ಅಶೋಕ್ ಸೇರಿದಂತೆ ಅಮೆರಿಕ ಹಾಗೂ ಭಾರತದ ಅನೇಕ ಅಧಿಕಾರಿಗಳು ಮೊದಲ ಏರ್ ಇಂಡಿಯಾ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆಯೇ ಜಯಕಾರ ಹಾಕಿದರು.

ಇದೇ ವೇಳೆ ಭಾರತೀಯ ಮೊದಲ ವಿಮಾನ ಇಲ್ಲಿಗೆ ಬಂದ ಸವಿನೆನಪಿಗಾಗಿ ಇಂದಿನ ದಿನವನ್ನು ಏರ್ ಇಂಡಿಯಾ ಡೆ ಎಂದು ಆಚರಿಸುವುದಾಗಿ ನಗರದ ಮೇಯರ್ ಕಚೇರಿ ಪ್ರಕಟಣೆ ಹೊರಡಿಸಿದೆ.

Write A Comment