ರಾಷ್ಟ್ರೀಯ

ಗೋರಕ್ಷಣೆಗಾಗಿ ಕೊಲ್ಲಲೂ ಸಿದ್ಧ: ಬಿಜೆಪಿ ಶಾಸಕನ ಪ್ರಚೋದನಾಕಾರಿ ಹೇಳಿಕೆ

Pinterest LinkedIn Tumblr

Koleಹೈದರಾಬಾದ್,ಡಿ.1: ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ‘ಬೀಫ್ ಖಾದ್ಯ ಉತ್ಸವ’ಆಯೋಜಿಸಿರುವುದನ್ನು ಸ್ಥಳೀಯ ಬಿಜೆಪಿ ಶಾಸಕ ರಾಜಾ ಸಿಂಗ್ ತೀವ್ರವಾಗಿ ಖಂಡಿಸಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಲ್ಲಿ ಗಂಭೀರ ಪರಿಣಾಮವಾದೀತೆಂದು ಧಮಕಿ ಹಾಕಿದ್ದಾರೆ. ಜನರಿಗೆ ತಮ್ಮ ಆಯ್ಕೆಯ ಆಹಾರವನ್ನು ತಿನ್ನುವ ಸ್ವಾತಂತ್ರವಿದೆ. ಆದರೆ ಹಾಗೆಂದು ಇತರರ ಧಾರ್ಮಿಕ ನಂಬಿಕೆಗಳಿಗೆ ಹಾನಿಯುಂಟು ಮಾಡಬಾರದೆಂದು ಅವರು ಹೇಳಿದ್ದಾರೆ.

‘‘ಗೋವುಗಳ ರಕ್ಷಣೆಗೆ ನಾವು ಕೊಲ್ಲಲು ಸಿದ್ಧ ಇಲ್ಲವೇ ಸಾಯಲೂ ಸಿದ್ಧ’’ ಎಂದು ಗುಡುಗಿರುವ ರಾಜಾಸಿಂಗ್, ಗೋಹಂತಕರನ್ನು ತಡೆ ಯಲು ನಮಗೆ ಹಕ್ಕಿದೆ. ಬೀಫ್ ಉತ್ಸ ವವು ಮತಗಳಿಕೆಗಾಗಿ ಮಾಡ ಲಾದ ರಾಜಕೀಯ ಸಂಚಾಗಿದೆ’’ ಎಂದು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು,ದಾದ್ರಿಯಂತಹ ಘಟನೆಯು ನಡೆಯುವುದು ತಪ್ಪಬೇಕಾದರೆ, ಈ ರೀತಿಯ ಕಾರ್ಯಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ತೆಲಂಗಾಣ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರಕಾರವು ದನಗಳ ಕಸಾಯಿಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದವರು ಆರೋಪಿಸಿದರು. ತನ್ನ ನಿಲುವನ್ನು ಬಿಜೆಪಿ ಬೆಂಬಲಿಸಲಿ ಅಥವಾ ತಿರಸ್ಕರಿಸಲಿ, ತಾನು ಬೀಫ್ ಖಾದ್ಯ ಉತ್ಸವವನ್ನು ವಿರೋಧಿಸುವುದಾಗಿ ಗೋಶಾಮಹಲ್ ಕ್ಷೇತ್ರದ ಶಾಸಕರಾಗಿರುವ ರಾಜಾಸಿಂಗ್ ಹೇಳಿದ್ದಾರೆ. ಉಸ್ಮಾನಿಯಾ ವಿವಿಯ ಕೆಲವು ವಿದ್ಯಾರ್ಥಿ ಸಂಘಟನೆಗಳು ಡಿಸೆಂಬರ್ 10ರಂದು ವಿವಿಯಲ್ಲಿ ಬೀಫ್ ಖಾದ್ಯ ಉತ್ಸವವನ್ನು ಆಯೋಜಿಸಿವೆ

ಈ ಮಧ್ಯೆ ರಾಜಾಸಿಂಗ್ ಲೋಧ್ ನೇತೃತ್ವದಲ್ಲಿ ಬಿಜೆಪಿ, ವಿಎಚ್‌ಪಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವೊಂದು, ಉಸ್ಮಾನಿಯಾ ವಿವಿಯ ಉಪಕುಲಪತಿಯಾದ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ರಂಜೀವ್ ಆರ್.ಆಚಾರ್ಯರನ್ನು ಭೇಟಿಯಾಗಿ ವಿವಿಯಲ್ಲಿ ಬೀಫ್ ಮೇಳ ಆಯೋಜಿಸುವುದನ್ನು ತಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

‘‘ಉಸ್ಮಾನಿಯಾ ವಿವಿಯ ಕೆಲವು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ವಿವಿಯ ಕ್ಯಾಂಪಸ್‌ನಲ್ಲಿ ಬೀಫ್ ಉತ್ಸವವನ್ನು ಆಯೋಜಿಸಲು ಯೋಚಿಸಿದ್ದು, ಕಾರ್ಯಕ್ರಮಕ್ಕೆ ಕೆಲವು ವಿವಾದಾತ್ಮಕ ರಾಜಕೀಯ ನಾಯಕರನ್ನು ಹಾಗೂ ಬರಹಗಾರರನ್ನು ಆಹ್ವಾನಿಸಿವೆ. ಶಿಕ್ಷಣಸಂಸ್ಥೆಯು ಜ್ಞಾನದೇಗುಲಗಳಾಗಿದ್ದು, ವಿವಿ ಆಡಳಿತವು ಕ್ಯಾಂಪಸ್‌ನಲ್ಲಿ ಶಾಂತಿಯುತ ವಾತಾವರಣವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿಯೋಗವು ಮನವಿಯಲ್ಲಿ ತಿಳಿಸಿದೆ.

2012ರಲ್ಲಿ ಉಸ್ಮಾನಿಯಾ ವಿವಿಯಲ್ಲಿ ಬೀಫ್ ಖಾದ್ಯ ಮೇಳವನ್ನು ಆಯೋಜಿಸಿದ ಸಂದರ್ಭದಲ್ಲಿ ಭಾರೀ ಹಿಂಸೆ ಹಾಗೂ ಘರ್ಷಣೆ ಭುಗಿಲೆದ್ದಿತ್ತು.

Write A Comment