ರಾಷ್ಟ್ರೀಯ

ಚೆನ್ನೈನಲ್ಲಿ ಭಾರಿ ಮಳೆ; 100 ವರ್ಷಗಳಲ್ಲೇ ಪ್ರಥಮ

Pinterest LinkedIn Tumblr

chennai-rains-pti_650x400_81448980549ಚೆನ್ನೈ, ಡಿ.1: ತಮಿಳುನಾಡಿದ ವಿವಿಧ ಭಾಗಗಳಳ್ಲಿ ಮಂಗಳವಾರ ಭಾರೀ ಮಳೆ ಸುರಿದಿದ್ದು, ರೈಲು , ವಿಮಾನ, ಬಸ್‌  ಸಂಚಾರ ಅಸ್ತವ್ಯಸ್ತಗೊಂಡಿದೆ. ನೂರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿ ಭಾರೀ ಮಳೆಯಾಗಿದೆ.

ಮುಖ್ಯ ಮಂತ್ರಿ ಜೆ.ಜಯಲಲಿತ ಮತ್ತು ಅವರ ಸಹೋದ್ಯೊಗಿ ಸಚಿವರು ಮಳೆಯಿಂದ ತೊಂದರೆಗೊಳಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೊಲೀಸ್‌, ಅಗ್ನಿಶಾಮಕ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಹಾರ ಪಡೆ , ಕೋಸ್ಟ್ ಗಾರ್ಡ್ಸ್‌ ಮಳೆಯಿಂದಾಗಿ  ಉಂಟಾಗಿರುವ ಸಮಸ್ಯೆಯನ್ನು ಎದುರಿಸಲು ಸಜ್ಜಾಗಿದೆ ಎಂದು ಮುಖ್ಯ ಮಂತ್ರಿ ಜಯಲಲಿತ ತಿಳಿಸಿದ್ದಾರೆ.

ಮುಂದಿನ ಕೆಲವೇ ಗಂಟೆಗಳಲ್ಲಿ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮಳೆಯಿಂದಾಗಿ ಮಧ್ಯ ಕೈಲಾಶ್‌ ಸಿಗ್ನಲ್‌ ರಸ್ತೆಯಲ್ಲಿ  ಬಿರುಕು ಉಂಟಾಗಿ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದೆ. ಮದ್ರಾಸ್‌ ಐಐಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.

ಮಳೆಯಿಂದಾಗಿ ಈ  ತನಕ ಮೃತಪಟ್ಟವರ ಸಂಖ್ಯೆ 188ಕ್ಕೆ ಏರಿದೆ. ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಭಾರೀ ಮಳೆಯಿಂದಾಗಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ಮುಖ್ಯ ಮಂತ್ರಿ ಜಯ ಲಲಿತಾ ತಲಾ ೪ ಲಕ್ಷ  ರೂ ಪರಿಹಾರ ಘೋಷಿಸಿದ್ದಾರೆ.

ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದ್ದು, ಡಿ.7ರಿಂದ ಆರಂಭಗೊಳ್ಳಬೇಕಿದ್ದ ಮಧ್ಯಾವಧಿ ಪರೀಕ್ಷೆಯನ್ನು ಮೂದೂಡಲಾಗಿದೆ.

ರೈಲ್ವೇ ಹಳಿಯ ಮೇಲೆ ಮಳೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ  ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment